ಬೆಂಗಳೂರು : ಇಂದಿನ ವಿಧಾನಸಭೆಯ ಗಮನ ಸೆಳೆಯುವ ಸೂಚನಾ ಕಲಾಪದಲ್ಲಿ ರಾಜ್ಯದಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಬಗ್ಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸರ್ಕಾರದ ಗಮನ ಸೆಳೆದರು.
ತುಳು ಭಾಷೆಯಲ್ಲೇ ಶಾಸಕ ಅಶೋಕ್ ರೈ ಮಾತನಾಡಿದ್ದಾರೆ. ನನಗೆ ಏನೂ ಅರ್ಥ ಆಗಿಲ್ಲ ಎಂದು ಸ್ಪೀಕರ್ ಖಾದರ್ ಹೇಳಿದ್ದಾರೆ. ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಇದೇನು ಮಂಗಳೂರು ಅಧಿವೇಶನವಾ ಎಂದು ತಮಾಷೆ ಮಾಡಿದ್ದಾರೆ.
ಅಶೋಕ್ ರೈ ಪ್ರಸ್ತಾಪಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿ ಶಾಸಕರು ಬೆಂಬಲಿಸಿದ್ದಾರೆ. ನೀವು ಸ್ಪೀಕರ್ ಆಗಿರುವಾಗ ಇದೊಂದು ಕೆಲಸ ಆಗಲಿ ಎಂದು ಶಾಸಕ ವೇದವ್ಯಾಸ ಕಾಮತ್ ಕೈ ಮುಗಿದರು. ಏನೂ ಮಂಡೆ ಬಿಸಿ ಮಾಡಬೇಡಿ, ಮಾಡಿಕೊಡುವ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.