ಮಳೆಗಾಲದಲ್ಲಿ ಕರಾವಳಿ ಎಲ್ಲೆಡೆ ಗಾಳ ಹಾಕಿ ಮೀನು ಹಿಡಿಯುವ ಸಂಭ್ರಮ

ಮಲ್ಪೆ : ಮಳೆಗಾಲ ಆರಂಭವಾಯಿತೆಂದರೆ ಮಲ್ಪೆ ಬಂದರಿನ ಸೀ ವಾಕ್‌ವೇ ಬಳಿ, ಹೊಳೆಬದಿ, ಸೇತುವೆ ಮೇಲೆ ಗಾಳ ಹಾಕಿ ಮೀನು ಹಿಡಿಯುವ ಯುವಕರು ಬಹಳಷ್ಟು ಮಂದಿ ಕಾಣಸಿಗುತ್ತಾರೆ. ಗುಂಪು ಗುಂಪಾಗಿ ಸಮುದ್ರ ತಡಿಯಲ್ಲಿ ಗಾಳ ಹಾಕಿ ಮೀನು ಹಿಡಿಯಲೆಂದು ಇಲ್ಲಿಗೆ ಬಂದು ಸೇರುತ್ತಾರೆ. ಅಂದರೆ ಇವರಲ್ಲಿ ಎಲ್ಲರೂ ಮೀನು ಹಿಡಿಯುವ ಕಾಯಕದವರಲ್ಲ. ಗಾಳ ಹಾಕಿ ಮೀನು ಹಿಡಿಯುವ ಹುಚ್ಚು. ಕೆಲವರಿಗೆ  ಇದೊಂದು ಮೋಜಿನ ಆಟವೂ ಹೌದು.

ಮಲ್ಪೆ ಸೀ ವಾಕ್‌ ಬಳಿ ಮಳೆಗಾಲ ಮತ್ತು ಬೇಸಗೆ ಎರಡು ಅವಧಿಯಲ್ಲಿ ಕಾಣ ಸಿಗುತ್ತಾರೆ. ಗಾಳದಿಂದ ಮೀನು ಭೇಟೆ ವೃತ್ತಿ ನಿರತ ಬಡ ಮೀನುಗಾರರಿಗೆ ಜೀವನಾಧಾರವಾಗಿದ್ದರೆ, ಪ್ರವೃತ್ತಿಯನ್ನಾಗಿಸಿ ಕೊಂಡ ಸಿರಿವಂತರಿಗೆ ಮನ ಸಂತೋಷದ ದಾರಿಯೂ ಹೌದು. ಒಂದು ಸಣ್ಣ ಮೀನು ಅವರ ಗಾಳಕ್ಕೆ ಸಿಕ್ಕಿಬಿದ್ದರೆ ಏನೋ ಒಂಥರ ಖುಷಿಯೋ ಖುಷಿ.

ಕೆಲವು ಶ್ರೀಮಂತ ವರ್ಗದ ಹವ್ಯಾಸಕ್ಕೆಂದು ಸಾವಿರಾರು ಮೌಲ್ಯದ ಗಾಳ ಮೀನುಗಾರಿಕೆ ಪರಿಕರಗಳೊಂದಿಗೆ ಹೊಳೆ- ನದಿ,
ಸಮುದ್ರ ತೀರದತ್ತ ಬಂದು ನುರಿತ ಮೀನುಗಾರರಂತೆ ನೀರಿಗೆ ಗಾಳ ಎಸೆದು ಸಾಮಾನ್ಯ ಮೀನುಗಾರರಂತೆ ಈ ಸಂದರ್ಭ
ಪರಿವರ್ತಿತರಾಗುತ್ತಾರೆ. ಇಲ್ಲಿ ಹಣವಂತರಿಗೆ ಮೀನು ಸಂಪಾದನೆ ನಗಣ್ಯವಾಗಿದ್ದರೂ, ಕೇವಲ ಖುಷಿಗಾಗಿ ಮಾತ್ರ.

Scroll to Top