ಉಡುಪಿ. ಜು 24: ಉಡುಪಿ ಬನ್ನಂಜೆ ಕೆ.ಎಸ್.ಆರ್.ಟಿ.ಸಿ ಬಸ್ ಸ್ಯ್ಟಾಂಡ್ ನಲ್ಲಿ ಖಿನ್ನತೆಗೊಳಗಾದ ಯುವಕನೊಬ್ಬ ತಾನು ಯು- ಟ್ಯೂಬ್ ಬ್ಲಾಗರ್ ಎಂದು ಮೊಬೈಲ್ ನಲ್ಲಿ ಚಿತ್ರೀಕರಣ ಹಾಗೂ ರೀಲ್ ಮಾಡಿ ಆತಂಕ ಸೃಷ್ಟಿಸಿ, ಸಾರ್ವಜನಿಕರಿಂದ ಧರ್ಮದೇಟು ತಿಂದ ಮೊಬೈಲ್ ಖಿನ್ನತೆಗೊಳಗಾದ ಯುವಕನನ್ನು ವಿಶುಶೆಟ್ಟಿಯವರು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವಕ ಹೊರ ಜಿಲ್ಲೆಯ ನಂದ (18 ವ) ತಾನು ಮನೋರೋಗಿಯಲ್ಲ ಎಂದು ಸಾಬೀತು ಮಾಡಲು ಯು – ಟ್ಯೂಬ್ ಬ್ಲಾಗರ್ ಆಗಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ವ್ಯಕ್ತಿಯಾಗಿ ಹಣ ಮಾಡಬೇಕೆಂದು ಅಂದುಕೊಂಡಿದ್ದೆ ಎಂದು ರಕ್ಷಣಾ ಸಮಯ ತಿಳಿಸಿದ್ದಾನೆ.
ಬಸ್ಸ್ ನಿಲ್ದಾಣದಲ್ಲಿ ದಲ್ಲಿ ಭದ್ರತಾ ಸಿಬ್ಬಂದಿಗಳು ಹಾಗೂ ಪೋಲಿಸರು ಹೆಚ್ಚಿನ ಆತಂಕ ಆಗದ ಹಾಗೆ ಸಹಕರಿಸಿ ವಿಶುಶೆಟ್ಟಿಯವರ ರಕ್ಷಣಾ ಕಾರ್ಯಕ್ಕೆ ನೆರವಾದರು. ಯುವಕನ ಸಂಬಂಧಿಕರು ಸಂಪರ್ಕಕ್ಕೆ ಸಿಕ್ಕಿದ್ದು, ಇಂತಹ ಘಟನೆಗಳ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಶಿಕ್ಷಣ ಸಂಸ್ಥೆ, ಹೆತ್ತವರಿಂದ ಹಾಗೂ ಸಮಾಜದಿಂದ ಆಗಬೇಕು.
ಮೊಬೈಲ್ ಗೀಳಿನಿಂದ ಪ್ರತಿ ದಿನ ಯುವಕ ಯುವತಿಯರು ಮನೋರೋಗಿಗಳಾಗುತ್ತಿದ್ದಾರೆ. ಈ ಬಗ್ಗೆ ವೈದ್ಯರೇ ಕಳವಳ ವ್ಯಕ್ತ ಪಡಿಸುತ್ತಿದ್ದು, ಜಾಗೃತಿ ಅಗತ್ಯ ಎಂಬ ಸಂದೇಶ ನೀಡಿದ್ದಾರೆ.