Sunday, September 8, 2024
Homeಸುದ್ದಿಕರಾವಳಿಉಡುಪಿ : ಹಲವೆಡೆ ಮಳೆ : ಕಾರಿನ ಮೇಲೆ ಬಿತ್ತು ಬೃಹತ್‌ ಬ್ಯಾನರ್‌

ಉಡುಪಿ : ಹಲವೆಡೆ ಮಳೆ : ಕಾರಿನ ಮೇಲೆ ಬಿತ್ತು ಬೃಹತ್‌ ಬ್ಯಾನರ್‌

ಉಡುಪಿ : ಜಿಲ್ಲೆಯಲ್ಲಿ ಬುಧವಾರ ಹಲವೆಡೆ ಉತ್ತಮ ಮಳೆಯಾಗಿದೆ. ಕುಂದಾಪುರ, ಬೈಂದೂರು, ಉಡುಪಿ, ಕಾರ್ಕಳ, ಹೆಬ್ರಿ, ಕಾಪು, ಬ್ರಹ್ಮಾವರ, ಹೆಬ್ರಿ, ಅಜೆಕಾರು, ಬೈಲೂರು, ಮಾಳ, ಸಿದ್ದಾಪುರ ಸುತ್ತಮುತ್ತಲಿನ ಭಾಗದಲ್ಲಿ ಬಿಟ್ಟುಬಿಟ್ಟು ಸಾಧಾರಣ ಮಳೆಯಾಗಿದೆ.

ಮಧ್ಯಾಹ್ನದ ಬಳಿಕ ರಾತ್ರಿವರೆಗೂ ಹಲವು ಕಡೆಗಳಲ್ಲಿ ಬಿಟ್ಟುಬಿಟ್ಟು ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಮಳೆಗೆ ಕುಂದಾಪುರ ಮತ್ತು ಕಾರ್ಕಳ ತಾಲೂಕಿನ ಹಲವೆಡೆ 41ಕ್ಕೂ ಅಧಿಕ ಮನೆಗಳಿಗೆ ಹಾನಿ ಸಂಭವಿಸಿದೆ.

ಕುಂದಾಪುರ ತಾಲೂಕಿನಲ್ಲಿ 7 ಮಂದಿ ಕೃಷಿಕರ ಅಡಕೆ ತೋಟಗಳಿಗೆ ಅಪಾರ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ ಕಾಲ 45.7 ಮಿ. ಮೀ. ಸರಾಸರಿ ಮಳೆಯಾಗಿದೆ.

ಕಾರಿನ ಮೇಲೆ ಬಿತ್ತು ಬೃಹತ್‌ ಬ್ಯಾನರ್‌


ಮಣಿಪಾಲದಲ್ಲಿ ಕಾರಿನ ಮೇಲೆ ಬೃಹತ್‌ ಬ್ಯಾನರ್‌ ಬಿದ್ದ ಘಟನೆ ಸಂಭ ವಿಸಿದೆ. ಮಣಿಪಾಲ ಡಿಸಿ ಕಚೇರಿ ರಸ್ತೆಯ ಬದಿಯಲ್ಲಿ ಕಾರೊಂದನ್ನು ನಿಲ್ಲಿಸಲಾಗಿತ್ತು. ಸಂಜೆ ಸುರಿದ ಗಾಳಿ ಮಳೆಗೆ ಜಾಹೀರಾತು ಹೋರ್ಡಿಂಗ್‌ ಅಳವವಡಿಸಲಾಗಿದ್ದು, ಅದರ ಮೇಲೆ ಬ್ಯಾನರ್‌ ಬಿದ್ದಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News