ಶಿರೂರು ಘಟನೆ ಮಾಸುವ ಮುನ್ನವೇ ಮತ್ತೊಂದು ಭೂಕುಸಿತ.. ಒಂದು ಮಗು ಸೇರಿ 7 ಜನರು ಸಾವು

ಅಂಕೋಲಾದ ಶಿರೂರಿನಲ್ಲಿ ನಡೆದ ಗುಡ್ಡ ಕುಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅವಘಡ ನಡೆದಿದೆ.

ಕೇರಳದ ವಯನಾಡಿನಲ್ಲಿ ಮಳೆಯಿಂದಾಗಿ ಭಾರೀ ಭೂಕುಸಿತ ಸಂಭವಿಸಿದ್ದು, ಸುಮಾರು 7 ಜನರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಜಿಲ್ಲೆಯ ಮೆಪ್ಪಾಡಿಯ ಮುಂಡಕ್ಕೈ ಮತ್ತು ಚೂರಲ್ಮಲಾದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಭೂಕುಸಿತದ ಪರಿಣಾಮ ಮಣ್ಣಿನಡಿಯಲ್ಲಿ ಹಲವಾರು ಜನರು ಸಿಲುಕಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸದ್ಯ ಒಂದು ಮಗು ಸೇರಿದಂತೆ 7 ಮೃತದೇಹಗಳು ಪತ್ತೆಯಾಗಿವೆ.

ಮುಂಡಕ್ಕೈ, ಚೂರಲ್ಮಾಲಕಾ, ಅಟ್ಟಮಾಲ ಮತ್ತು ನೂಲ್ಪಳ ಗ್ರಾಮಗಳು ಮಳೆಯಿಂದಾಗಿ ಭೂಕುಸಿತದಿಂದಾಗಿ ಹಾನಿಗೊಳಗಾಗಿವೆ. ಪರಿಣಾಮ ಸಂಪರ್ಕ ಕೂಡ ಕಡಿತಗೊಂಡಿವೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತಾಗಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ರಕ್ಷಣೆಗಾಗಿ ವಾಯುಪಡೆಯ 2 ಹೆಲಿಕಾಪ್ಟರ್ ವಯನಾಡಿಗೆ ತೆರಳಲಿದೆ ಎಂದು ಬರೆದುಕೊಂಡಿದ್ದಾರೆ. ಭೂಕುಸಿತ ಸಂಬಂಧ ಅನೇಕ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

Baravanige News

Translate »

You cannot copy content from Baravanige News

Scroll to Top