ಶಿರ್ವ : ಸಾವಿನಲ್ಲೂಒಂದಾದ ದಂಪತಿ: 5 ಗಂಟೆಗಳ ಅಂತರ

ಶಿರ್ವ : ಒಂದೇ ದಿನ 5 ಗಂಟೆಗಳ ಅಂತರದಲ್ಲಿ ಪತಿ-ಪತ್ನಿ ಸಾವಿನಲ್ಲೂ ಒಂದಾದ ಘಟನೆ ನಡೆದಿದೆ.

ಬೆಳ್ಳೆ ಗ್ರಾ. ಪಂ. ವ್ಯಾಪ್ತಿಯ ಎಡೇರುಗುತ್ತು ನಿವಾಸಿ ಸುಂದರ ಶೆಟ್ಟಿ (70)ಮತ್ತು ಅವರ ಪತ್ನಿ ಎಡೇರುಗುತ್ತು ವನಜಾ ಶೆಟ್ಟಿ(62) ಜು.29 ರಂದು ಒಂದೇ ದಿನ ನಿಧನ ಹೊಂದಿದರು.

ಸೋಮವಾರ ಬೆಳಗ್ಗೆ 9 ಗಂಟೆಗೆ ಸುಂದರ ಶೆಟ್ಟಿಯವರು ವಯೋಸಹಜ ಅನಾರೋಗ್ಯದಿಂದ ಎಡೇರುಗುತ್ತುವಿನಲ್ಲಿ ನಿಧನ ಹೊಂದಿದರು. ಅವರ ಪಾರ್ಥಿವ ಶರೀರವನ್ನು ಶಂಕರಪುರದ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು.

ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಅವರ ಪತ್ನಿ ವನಜಾ ಶೆಟ್ಟಿಯವರೂ ನಿಧನ ಹೊಂದಿದ್ದು ಪತಿ-ಪತ್ನಿ ಸಾವಿನಲ್ಲೂ ಒಂದಾದರು.

ಸುಂದರ ಶೆಟ್ಟಿಯವರು ಪಾಕ ತಜ್ಞರಾಗಿದ್ದು ಅಡುಗೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದರು. ಅವರಿಗೆ ಮಕ್ಕಳು ಇಲ್ಲದೇ ಇದ್ದು ಕುಟುಂಬಸ್ಥರನ್ನು ಅಗಲಿದ್ದಾರೆ.

Scroll to Top