ಮಂಗಳೂರು: ಪಬ್‌ಜಿ ಆಟದ ಅಭ್ಯಾಸವಿದ್ದ ಯುವತಿ ನಾಪತ್ತೆ!

ಮಂಗಳೂರು : ಮೊಬೈಲ್‌ನಲ್ಲಿ ಪಬ್‌ಜಿ ಆನ್‌ಲೈನ್‌ ಆಟವಾಡುವ ಹವ್ಯಾಸವಿದ್ದ ನಗರದ ಬಿಜೈಯ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಕೆಲಿಸ್ತಾ ಫೆರಾವೊ (18) ನಾಪತ್ತೆಯಾದ ಯುವತಿ.

ಎಸ್.ಎಸ್.ಎಲ್.ಸಿ ಬಳಿಕ ಆಟೋಮೊಬೈಲ್‌ ಕೋರ್ಸ್‌ಗೆ ಸೇರ್ಪಡೆಗೊಂಡಿದ್ದ ಈಕೆ ಮಂಗಳವಾರ ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದಳು. ಇದು ಮನೆಯವರ ಗಮನಕ್ಕೆ ಬಂದ ಕೂಡಲೇ ಅವರು ಹುಡುಕಾಟ ಆರಂಭಿಸಿದರು. ಸಿಸಿ ಕ್ಯಾಮರಾವೊಂದನ್ನು ಪರಿಶೀಲಿಸಿದಾಗ ಈಕೆ ಆಟೋರಿಕ್ಷಾದಲ್ಲಿ ಹೋಗುತ್ತಿರುವ ದೃಶ್ಯ ದಾಖಲಾಗಿತ್ತು.

ಕೆಲಿಸ್ತಾ ಕನ್ನಡ, ತುಳು, ಇಂಗ್ಲಿಷ್‌, ಕೊಂಕಣಿ ಭಾಷೆಗಳನ್ನು ಮಾತನಾಡುತ್ತಾಳೆ. ಬಿಳಿ ಟಾಪ್‌ ಮತ್ತು ನೀಲಿ ಜೀನ್ಸ್‌ ಪ್ಯಾಂಟ್‌ ಧರಿಸಿದ್ದಳು. ಮಾಹಿತಿ ದೊರೆತವರು ಬರ್ಕೆ ಪೊಲೀಸ್‌ ಠಾಣೆ (0824-2220522) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಕೆಲಿಸ್ತಾಗೆ ಪಬ್‌ಜೀ ಗೇಮ್‌ನ ಅಭ್ಯಾಸವಿತ್ತು. ಈಕೆ 9ನೇ ತರಗತಿಯಲ್ಲಿದ್ದಾಗಲೂ ಪಬ್‌ಜಿ ಆಡುತ್ತಿದ್ದಳು. ಶಾಲೆಯಿಂದ ಮನೆಗೆ ಬಂದ ಮೇಲೆ ವೈಫೈ ಮೂಲಕ ಮನೆಯ ಮೊಬೈಲ್‌ನಲ್ಲಿ ಪಬ್‌ಜಿ ಆಡುತ್ತಿದ್ದಳು. ಈ ಬಗ್ಗೆ ಹೆತ್ತವರು ಹಲವಾರು ಬಾರಿ ಎಚ್ಚರಿಕೆ ನೀಡಿದ್ದರು. ಇದೇ ವಿಚಾರವಾಗಿ ಹಿಂದೊಮ್ಮೆ ಗಲಾಟೆ ಕೂಡ ನಡೆದಿತ್ತು. ಇತ್ತೀಚೆಗೆ ಮನೆಯವರು ಈಕೆಗೆ ಮೊಬೈಲ್‌ ಕೊಡಲು ನಿರ್ಧರಿಸಿ ಸಿಮ್‌ ಖರೀದಿಸಿದ್ದರು ಎಂದು ತಿಳಿದು ಬಂದಿದೆ.

Baravanige News

Adblock Detected!

Our website is made possible by displaying online advertisements to our visitors. Please consider supporting us by whitelisting our website.

You cannot copy content from Baravanige News

Scroll to Top