ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು

ಉಡುಪಿ: ಕೋಟ ಹೈಸ್ಕೂಲ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಕಾರು ಚಾಲಕ ಕಾರನ್ನು ಚಲಾಯಿಸುತ್ತಿದ್ದು ಚಾಲಕನಿಗೆ ತಲೆ ಸುತ್ತು ಬಂದ ಪರಿಣಾಮ ಕಾರನ್ನು ನಿಯಂತ್ರಣ ತರಲು ಸಾಧ್ಯವಾಗದ ಕಾರಣ, ಕಾರು ರಸ್ತೆಯ ಬದಿಗೆ ಚಲಾವಣೆಯಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ‌ಹೊಡೆದಿದೆ.

ಕಾರಿನಲ್ಲಿ ಮೆಸ್ಕಾಂನ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗದವರಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಕಾರು ಡಿಕ್ಕಿಯ ರಭಸಕ್ಕೆ ‌ಕಾರಿನ ಮುಂಭಾಗ ಸ್ವಲ್ಪ ನುಜ್ಜುಗುಜ್ಜಾಗಿದೆ.

You cannot copy content from Baravanige News

Scroll to Top