ದೀಪಾವಳಿಯ ಸಂಭ್ರಮ ಶುರುವಾಗಿದೆ. ಮನೆ ಮನೆಗಳಲ್ಲಿ ತಯಾರಿ ಜೋರಾಗಿದೆ. ಎಲ್ಲರೂ ಹೂವು-ಹಣ್ಣು, ಪಟಾಕಿ ಖರೀದಿಗೆ ಮುಗಿಬಿದ್ದಿದ್ದಾರೆ. ಹಬ್ಬದ ಸಡಗರ ಜೋರಾಗುತ್ತಿದ್ದಂತೆ ಪಟಾಕಿಗಳ ಸದ್ದು ಕೂಡಾ ಮುಗಿಲು ಮುಟ್ಟಿದೆ.
ದೀಪಾವಳಿಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಶಿರ್ವದ ಅಶ್ವತ್ಥ ಕಟ್ಟೆ ಬಳಿ ಡ್ರೀಮ್ ಕ್ರಾಕರ್ಸ್ ಪಟಾಕಿ ಅಂಗಡಿ ಸಜ್ಜಾಗಿದೆ.
ಪಟಾಕಿ ತಾಯಾರಿಸುವ ಕಚ್ಚವಸ್ತುಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪಟಾಕಿಗಳ ಉತ್ಪಾದನೆಯಾಗಿಲ್ಲ. ಜೊತಗೆ ಬೇರೆ ಕಡೆಯಿಂದ ಬೇಡಿಕೆಗೆ ತಕ್ಕಂತೆ ಪಟಾಕಿಗಳು ಸಿಗುತ್ತಿಲ್ಲ. ಈ ಮಧ್ಯೆ ಸರ್ಕಾರ ಹಸಿರು ಪಟಾಕಿಯನ್ನೆ ಹೊಡೆಯಬೇಕು ಅಂತ ಆದೇಶ ಮಾಡಿರುವ ಹಿನ್ನೆಲೆ ಹಸಿರು ಪಾಟಾಕಿ ತಯಾರಿಸಲು ಬೇಕಾಗುವ ಸ್ಟ್ರೋಟಿಯಂ ನೈಟ್ರೇಟ್ ಬೆಲೆ ದುಬಾರಿಯಾಗಿದೆ. ಈ ಸ್ಟ್ರೋಟಿಯಂ ನೈಟ್ರೇಟ್ ಬಳಕೆ ಮಾಡಿಯೇ ಹಸಿರು ಪಟಾಕಿ ತಾಯಾರಿಸಬೇಕು. ಹೀಗಾಗಿ ಪಟಾಕಿಗಳ ಬೆಲೆ ಏರಿಕೆಯಾಗಿದೆ.
ಆದರೂ ಕೂಡಾ ಡ್ರೀಮ್ ಕ್ರಾಕರ್ಸ್ ಬಳಿ ರಿಯಾಯಿತಿ ದರದಲ್ಲಿ ಎಲ್ಲಾ ಪಟಾಕಿಗಳು ಸಿಗುವುದರಿಂದ ಶಿರ್ವ ಜನತೆಗೆ ಕೊಂಚ ರಿಲೀಫ್ ಸಿಕ್ಕಿದೆ.