ಕಾಪುವಿನ ಹಿರಿಯ ಉದ್ಯಮಿ ಕಾಪು ಕಮಲಾಕ್ಷ ನಾಯಕ್ ನಿಧನ

ಕಾಪು : ಕಾಪು ಪೇಟೆಯ ಹಿರಿಯ ಉದ್ಯಮಿ ಕಾಪು ಕಮಲಾಕ್ಷ ನಾಯಕ್ (71) ಅವರು (ಆ.13      ರಂದು ) ಮುಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಪುತ್ರ ಯುವ ಉದ್ಯಮಿ ಅನುಪೂರ್ವಿ ಸಮೂಹ ಸಂಸ್ಥೆಗಳ ಸ್ಥಾಪಕ ಹರೀಶ್ ನಾಯಕ್ ಮತ್ತು ಪುತ್ರಿ ಲಕ್ಷ್ಮೀ ಮೋಹನ್ ದಾಸ್ ಶೆಣೈ ಅವರನ್ನು ಅಗಲಿದ್ದಾರೆ.

ಕಾಪು ಲಕ್ಷ್ಮೀ ಜನರಲ್ ಸ್ಟೋರ್ಸ್ ನ ಮಾಲಕರಾಗಿದ್ದ ಅವರು ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡು ಬರುತ್ತಿದ್ದರು.

1975ರಲ್ಲಿ ಕಾಪುವಿನಲ್ಲಿ ಸಂಘ ಪರಿವಾರದ ಸದಸ್ಯರಾಗಿ, ಕಾಪು ಮಂಡಲ ಬಿಜೆಪಿಯ ಮಾಜಿ ಮಂಡಲ ಅಧಕ್ಷರಾಗಿ ಹಲವು ವರ್ಷಗಳ ಕಾಲ ಬಿಜೆಪಿ ಕಚೇರಿಯ ಸಂಪೂರ್ಣ ಜವಾಬ್ದಾರಿ ವಹಿಸಿ ನಿರ್ವಹಿಸಿದ್ದರು. ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಹಳೆ ಹಳೆಮಾರಿಯಮ್ಮ ದೇವಸ್ಥಾನದ ಮಾಜಿ ಮೊಕ್ತೇಸರರಾಗಿದ್ದು, ಕಾಪು ನಾಯಕ್ ಕುಟಂಬದ ಶ್ರೀ ಮೂಲನಾಗ ದೇವರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಗಿ ಶ್ರೀ ಮೂಲ ನಾಗ ಸಾನಿಧ್ಯದ ಜೀರ್ಣೋದ್ಧಾರ ಕಾರ್ಯದಲ್ಲೂ ಮುಂಚೂಣಿಯ ಪಾತ್ರ ನಿರ್ವಹಿಸಿದ್ದರು.

You cannot copy content from Baravanige News

Scroll to Top