ಖಾಸಗಿ ಕಾರ್ಯಕ್ರಮದಲ್ಲಿ ದೈವ ಆಹ್ವಾಹನೆ ರೀತಿ ನೃತ್ಯ ಮಾಡಿದ ಮಹಿಳೆ : ಕಣ್ಮರೆಯಾಗುತ್ತಿರುವ ತುಳುನಾಡಿನ ದೈವಾರಾಧನೆ ಸಂಸ್ಕೃತಿ

ಮಂಗಳೂರು : ದೈವರಾಧನೆ ತುಳುನಾಡಿನ ವಿಶೇಷ ಪದ್ಧತಿ. ಕರಾವಳಿ ಭಾಗದಲ್ಲಿರುವ ದೈವಾರಾಧನೆಗೆ ಅನೇಕ ವರ್ಷಗಳ ಇತಿಹಾಸವಿದ್ದು, ಅದರದೇ ಆದ ಅನೇಕ ವಿಚಾರಗಳಲ್ಲಿ ಪ್ರಸಿದ್ಧಿ ಪಡೆದಿದೆ.

ಇತ್ತೀಚಿನ ದಿನಗಳಲ್ಲಿ ದೈವರಾಧನೆ ಯಾವ ಮಟ್ಟಕ್ಕೆ ಹೋಗಿದೆಯೆಂದರೆ ರಸ್ತೆಯ ಮೆರವಣಿಗೆಯಲ್ಲಿ, ಶಾಲಾ-ಕಾಲೇಜುಗಳಲ್ಲಿ ಛದ್ಮವೇಷ ಹಾಕುವುದರ ಮೂಲಕ ದೈವಾರಾಧನೆಯ ವಿಷಯದಲ್ಲಿ ಅಪಪ್ರಚಾರಗಳು ದಿನದಿಂದ ದಿನಕ್ಕೆ ಹೆಚ್ಚಾಗಿ ಕಂಡುಬರುತ್ತಿವೆ.

ಇದೇ ರೀತಿಯ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಇಬ್ಬರು ಮಹಿಳೆಯರು ಮೈಮೇಲೆ ದೈವ ಆಹ್ವಾಹನೆಯಾದ ರೀತಿಯಲ್ಲಿ ನರ್ತಿಸಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಬಗ್ಗೆ ಹಲವಾರು ಮಂದಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಈ ರೀತಿ ಅಪಪ್ರಚಾರ ವೆಸಗಿದವರು ಕ್ಷಮೆಕೋರುವಂತೆ ಆಗ್ರಹಿಸುತ್ತಿದ್ದಾರೆ.

Baravanige News

Adblock Detected!

Our website is made possible by displaying online advertisements to our visitors. Please consider supporting us by whitelisting our website.

You cannot copy content from Baravanige News

Scroll to Top