ಉಡುಪಿ – ಮ್ಯಾನೆಜರ್ ಗೆ ಚೂರಿ ಇರಿದ ಸೆಕ್ಯೂರಿಟಿ ಗಾರ್ಡ್ ಅರೆಸ್ಟ್

ಉಡುಪಿ : ಮ್ಯಾನೇಜರ್‌ಗೆ ಚೂರಿ ಇರಿದ ಆರೋಪಿ ಸೆಕ್ಯೂರಿಟಿ ಗಾರ್ಡನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಪ್ರಕರಣದ ಆರೋಪಿ ಪ್ರಸಾದ್ ಭಾನುವಾರ ಶೋರೂಂನ ಕ್ಲಸ್ಟರ್‌ ಮ್ಯಾನೇಜರ್‌ ರೋನ್ಸನ್ ಎವರೆಸ್ಟ್ (36) ಎಂಬವರಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ. ನಗರದ ಹರ್ಷ ಶೋರೂಂನಲ್ಲಿ ಈ ಘಟನೆ ನಡೆದಿದೆ.

ಅಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರಸಾದ್‌ಗೆ, ಕೆಲಸದಲ್ಲಿ ಅಶಿಸ್ತು ತೋರಿದ್ದಕ್ಕಾಗಿ ಕೆಲಸದಿಂದ ತೆಗೆಯುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನನ್ನು ಕೆಲಸದಿಂದ ತೆಗೆಯದಂತೆ ರೋನ್ಸನ್ ಬಳಿ ಕೇಳಿಕೊಂಡಿದ್ದ. ಮರುದಿನ ಮೀಟಿಂಗ್‌ನಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ರೋನ್ಸನ್ ಹೇಳಿದ್ದರು. ಪ್ರಸಾದ್‌ ಗೌಂಡ್‌ ಫ್ಲೋರ್‌ನಲ್ಲಿ ಕಾದು ಕುಳಿತ್ತಿದ್ದು, ಅಲ್ಲಿಗೆ ಬಂದ ರೋನ್ಸನ್‌ಗೆ ಚೂರಿಯಲ್ಲಿ ಇರಿದ. ಓಡಿದ ರೋನ್ಸನನ್ನು ಬೆನ್ನಟ್ಟಿ ಮತ್ತೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದ. ಈಗ ಈ ದೃಶ್ಯಗಳು ಶೋರೂಂನ ಸಿಸಿ ಕ್ಯಾಮರಗಳಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ. ಭಾನುವಾರ ಸಂಜೆ 7.30ಕ್ಕೆ ನಡೆದ ಈ ಘಟನೆಯ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿ ಪ್ರಸಾದ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಳಪಡಿಸಿ ಹಿರಿಯಡ್ಕ ಜೈಲಿಗೆ ಕಳುಹಿಸಿದ್ದಾರೆ.

You cannot copy content from Baravanige News

Scroll to Top