ತಂದೆಯನ್ನು ಆಸ್ಪತ್ರೆಗೆ ಸೇರಿಸಿ ಕಾರಿನಲ್ಲಿ ಎಸಿ ಹಾಕಿ ಮಲಗಿದ್ದ ಮಗ ಸಾವು

ಉಡುಪಿ : ತಂದೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಮಗ ಆಸ್ಪತ್ರೆ ಹೊರಗೆ ಪ್ರಾಣ ಬಿಟ್ಟಿದ್ದಾನೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ನಿವಾಸಿ ಗುರುರಾಜ್ ಮೃತ ವ್ಯಕ್ತಿ.

ಗುರುರಾಜ್ ಅಣ್ಣನ ಸ್ನೇಹಿತನೊಂದಿಗೆ ತನ್ನ ತಂದೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ರಾತ್ರಿ ಕಾರಿನಲ್ಲಿ ಮಲಗಿ ಬೆಳಗಾಗುವಷ್ಟರಲ್ಲೇ ಸಾವನ್ನಪ್ಪಿದ್ದಾರೆ.

ಗುರುರಾಜ್‌ ತನ್ನ ತಂದೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದ ಹಿನ್ನೆಲೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ತನ್ನದೇ ಕಾರಿನಲ್ಲಿ ಗ್ಲಾಸ್ ಮುಚ್ಚಿ ಎಸಿ ಹಾಕಿ ಮಲಗಿದ್ದರು.

ಬೆಳಗಾಗುವಷ್ಟರಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಉಸಿರುಗಟ್ಟಿ ಸಾವನ್ನಪ್ಪಲು ನಿಖರ ಕಾರಣ ಮರಣೋತ್ತರ ವರದಿ ಬಳಿಕವಷ್ಟೇ ತಿಳಿಯಲಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top