ಕಾರ್ಕಳ: ಕೋಲಿನಿಂದ ಬಡಿದು ಕಾಲು ಮುರಿದ ಕೌನ್ಸಿಲರ್!

ಕಾರ್ಕಳ: ನಗರದ ಬಂಡೀಮಠ ಬಸ್ ನಿಲ್ದಾಣ ಬಳಿಯ ಕೆಎಂಎಫ್ ಹಾಲಿನ ಬೂತ್ ಮುಂಭಾಗದಲ್ಲಿ ವ್ಯಕ್ತಿಯೊಬ್ಬರಿಗೆ ಕಾರ್ಕಳ ಪುರಸಭಾ ಹಿರಿಯ ಕೌನ್ಸಿಲರ್ ಸೀತಾರಾಮ ದೇವಾಡಿಗ ಕೋಲಿನಿಂದ ಬಡಿದ ಪರಿಣಾಮವಾಗಿ ಕಾಲು ಮೂಳೆ ಮುರಿತಕ್ಕೊಳಗಾಗಿದೆ.

ರವಿವಾರ ಮಧ್ಯಾಹ್ನದ ವೇಳೆಗೆ ಈ ಘಟನೆ ನಡೆದಿದ್ದು, ಹಾಲಿನ ಬೂತ್ ನ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ನಿಟ್ಟೆ ಮಾಹಾಬಲ ಮೂಲ್ಯ ಎಂಬುವವರು ಘಟನೆಯಲ್ಲಿ ಗಾಯಗೊಂಡಿದ್ದು, ಅವರನ್ನು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಮಹಾಬಲ ಮೂಲ್ಯ ಜಗಳಕ್ಕೆ ಮುಂದಾಗಿದ್ದು ಅದೇ ಸಂದರ್ಭದಲ್ಲಿ ಬೂತ್ ನೊಳಗಿದ್ದ ಕೋಲಿನಿಂದ ಏಕಾಏಕಿಯಾಗಿ ಸೀತಾರಾಮ ದಾಳಿ ನಡೆಸಿರುವು ಕುರಿತು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಘಟನೆಯ ಬಳಿಕ ಸೀತಾರಾಮ ದೇವಾಡಿಗ ದ್ವಿಚಕ್ರ ವಾಹನದಲ್ಲಿ ಹೊರಟು ಹೋಗಿದ್ದಾರೆ ಎನ್ನಲಾಗಿದೆ.

ಮನೆ ಸ್ಥಿತಿ ಅತಂತ್ರ: ವಿವಾಹಿತರಾಗಿರುವ ಮಹಾಬಲ ಮೂಲ್ಯ ಅವರು, ಪತ್ನಿ ಮಕ್ಕಳಿಂದ ದೂರು ಉಳಿದಿದ್ದರು. ಆತನ ತಾಯಿ ಕುರುಡರಾಗಿದ್ದು ಮನೆಯಲ್ಲಿ ಇದ್ದಾರೆ. ತಂಗಿ ತವರು ಮನೆಯಲ್ಲಿ ಉಳಿದುಕೊಂಡಿದ್ದು ತನ್ನ ಮಕ್ಕಳನ್ನು ಹಾಗೂ ತಾಯಿಯನ್ನು ಸಾಕುವ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ. ಅದಕ್ಕಾಗಿ ಅವರು ಕೂಲಿ ಕೆಲಸ ಮಾಡುತ್ತಿದ್ದಾರೆ. ಇತ್ತ ಮಹಾಬಲ ಮೂಲ್ಯ ಕೂಲಿ ಕೆಲಸ ಮಾಡುತ್ತಿದ್ದು, ಮನೆಗೆ ವಾರಕ್ಕೊಮ್ಮೆ ಹೋಗುತ್ತಿದ್ದರು. ಜೊತೆಗೆ ಅವರಿಗೆ ಬಹುದಿನಗಳಿಂದ ಕುಡಿತದ ಚಟ ಇದೆ. ಘಟನೆಯ ಮಾಹಿತಿ ತಿಳಿದ ಮಹಾಬಲ ಮೂಲ್ಯದ ತಂಗಿ ಅಣ್ಣದ ಆರೈಕೆಗಾಗಿ ಉಡುಪಿಗೆ ತೆರಳಿದ್ದು, ನೆರವಿನ ಹಸ್ತ ಚಾಚಿದ್ದಾರೆ.

You cannot copy content from Baravanige News

Scroll to Top