ಪಡುಬಿದ್ರಿ: ಸ್ಕೂಟಿಯಿಂದ ಬಿದ್ದು ಮಹಿಳೆ ತೀವ್ರತರವಾಗಿ ಗಾಯಗೊಂಡ ಘಟನೆ ಪಡುಬಿದ್ರಿ ಜಂಕ್ಷನ್‌ನಲ್ಲಿ ಸಂಭವಿಸಿದೆ.
ನಂದಿಕೂರು ನಿವಾಸಿ ಸರ್ವೇಶ್ವರೀ ಶೆಟ್ಟಿ (58) ಗಾಯಗೊಂಡವರು. ಅವರು ತನ್ನ ಮಗನೊಂದಿಗೆ ಸಹಸವಾರೆಯಾಗಿ ಸ್ಕೂಟಿಯಲ್ಲಿ ಬರುತ್ತಿದ್ದರು. ಈ ವೇಳೆ ಮಗ ಹೊಟೇಲ್ ವಿಜಯ ಭವನ ಬಳಿಯ ಸರ್ವೀಸ್ ರಸ್ತೆಯಲ್ಲಿ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ತಾಯಿ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡರು.
ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನ ಮಗನೊಂದಿಗೆ ಪಡುಬಿದ್ರಿಯ ಬಂಟರ ಭವನದಲ್ಲಿನ ಮದುವೆ ಕಾರ್ಯಕ್ರಮವೊಂದಕ್ಕೆ ಸ್ಕೂಟಿಯಲ್ಲಿ ಬರುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ.