ಉಡುಪಿ: ಪಡುಬಿದ್ರೆಯ ವಿಶ್ವ ಕಲ್ಲಟ್ಟೆ ಇವರು ಚುನಾವಣೆಗೆ ಮುಂಚೆ ಮೋದಿಯು 3ನೇ ಬಾರಿಗೆ ಪ್ರಧಾನ ಮಂತ್ರಿಯಾಗಬೇಕೆಂದು ಹಾಗೂ ಅವರ ಶ್ರೇಯೋಭಿವೃದ್ಧಿಯ ಉದ್ದೇಶದಿಂದ ಅಯ್ಯಪ್ಪ ಸ್ವಾಮಿಯಲ್ಲಿ ಹರಕೆಯ ಸಂಕಲ್ಪವನ್ನು ಮಾಡಿದ್ದರು. ಹರಕೆ ಈಗಾಗಲೇ ಈಡೇರಿರುವುದರಿಂದ ಹರಕೆಯಂತೆ ಪಡುಬಿದ್ರೆಯಿಂದ ಶಬರಿಮಲೆಗೆ ಮೂಲಕ ಪಾದಯಾತ್ರೆ ಮಾಡುತ್ತಿದ್ದಾರೆ.

18ನೇ ವರ್ಷದ ಶಬರಿಮಲೆ ಯಾತ್ರೆ ಮಾಡುತ್ತಿರುವ ವಿಶ್ವ ಕಲ್ಲಟ್ಟೆ ಇವರು, ಸತತ 8 ವರ್ಷಗಳಿಂದ ಪಾದಯಾತ್ರೆ ಮೂಲಕ ಅಯ್ಯಪ್ಪನ ದರ್ಶನ ಮಾಡುತ್ತಿದ್ದಾರೆ.