ಯೂಟ್ಯೂಬ್​ನಲ್ಲಿ ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಮಾಡುವುದು ಹೇಗೆ?

ಆ್ಯಡ್ ಬ್ಲಾಕರ್ ಉಪಯೋಗಿಸಿ:

ಬ್ರೌಸರ್‌ನಲ್ಲಿ ಯೂಟ್ಯೂಬ್‌ ವಿಡಿಯೋಗಳನ್ನು ವೀಕ್ಷಿಸುತ್ತೀರಿ ಎಂದಾದರೆ ಗುಣಮಟ್ಟದ ಜಾಹೀರಾತು ಬ್ಲಾಕರ್‌ಗಳನ್ನು ಉಪಯೋಗಿಸಿದರೆ ನಿಮಗೆ ಆ್ಯಡ್‌ಫ್ರೀ ಯೂಟ್ಯೂಬ್‌ ವೀಕ್ಷಣೆ ಸಿಗುತ್ತದೆ. ಆಡ್‌ಬ್ಲಾಕ್‌, ಸ್ಟಾಪ್‌ ಆಡ್‌ಗಳಂತಹ ಆಡ್‌ ಬ್ಲಾಕರ್‌ಗಳು ಬ್ರೌಸರ್‌ ಎಕ್ಸಟೆನ್ಷನ್‌ ಆಗಿ ದೊರೆಯುತ್ತವೆ. ಇನ್‌ಸ್ಟಾಲ್‌ ಮಾಡಿಕೊಂಡು ನೀವು ಜಾಹೀರಾತು ಮುಕ್ತ ಯೂಟ್ಯೂಬ್‌ ಆನಂದಿಸಬಹುದು. ಆ್ಯಡ್‌ಬ್ಲಾಕರ್‌ಗಳಿಗಿಂತ ಬೇರೆ ಆಯ್ಕೆಗಳೂ ಕೂಡ ಇವೆ. ಆಡ್‌ಬ್ಲಾಕರ್‌ ಬಳಸಲು ಆಗಿಲ್ಲವೆಂದರೆ, ಯೂಟ್ಯೂಬ್‌ ವಿಡಿಯೋದ URL ಮತ್ತು ಪದಗಳ ಮೂಲಕ AdlessTube, ViewPure ಮತ್ತು Voilaದಂತಹ ಸರ್ಚ್‌ ಇಂಜಿನ್‌ಗಳಲ್ಲಿ ನೀವು ಜಾಹೀರಾತಯ ಮುಕ್ತ ವಿಡಿಯೋಗಳನ್ನು ನೋಡಬಹುದು.

ಯೂಟ್ಯೂಬ್ ಪರ್ಯಾಯ ಆ್ಯಪ್​ಗಳನ್ನು ಬಳಸಿ:

ಜಾಹೀರಾತು ಬೇಡ ಎಂದರೆ ಯೂಟ್ಯೂಬ್‌ನಂತೆಯೇ ಇರುವ ಪರ್ಯಾಯ ಆ್ಯಪ್‌ಗಳನ್ನು ಬಳಸಬಹುದು. OGYoutube, DNS66, NewPipe, YT Vanced, Ad Clearನಂತಹ ಆ್ಯಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಅವುಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವ ಮೂಲಕ ನೀವು ಜಾಹೀರಾತು ಮುಕ್ತ ಯೂಟ್ಯೂಬ್‌ ವಿಡಿಯೋಗಳನ್ನು ನೋಡಬಹುದು. ಬೇಕಾದಲ್ಲಿ ಡೌನ್‌ಲೋಡ್‌ ಮಾಡಿಕೊಂಡು ವೀಕ್ಷಿಸಬಹುದು. ಸ್ವತಃ ಯೂಟ್ಯೂಬ್ ಡೌನ್ಲೋಡ್ ಆಯ್ಕೆ ನೀಡಿದ್ದು, ನಿಮ್ಮ ಬಳಿ ಇಂಟರ್ನೆಟ್ ಕನೆಕ್ಷನ್ ಇಲ್ಲ ಎಂದಾದರು ಡೌನ್ಲೋಡ್ ಮಾಡಿದ್ದರೆ ಆರಾಮವಾಗಿ ಯಾವುದೇ ಜಾಹೀರಾತು ಇಲ್ಲದೆ ವೀಕ್ಷಿಸಬಹುದು.

ಅಂತೆಯೆ ಕೇವಲ ಒಂದು ಡಾಕ್ ಹಾಕುವುದರಿಂದ ಯೂಟ್ಯೂಬ್​ನಲ್ಲಿ ಬರುವ ಜಾಹೀರಾತುಗಳನ್ನು ಬ್ಲಾಕ್ ಮಾಡಬಹುದು. ಯಾವುದೇ ಯೂಟ್ಯೂಬ್‌ ಲಿಂಕ್‌ನಲ್ಲಿ youtube.com ನಂತರದಲ್ಲಿ ಬರುವ ‘/’ ಚಿಹ್ನೆಗೂ ಮೊದಲು ಒಂದು ಚುಕ್ಕಿ (.) ಹಾಕಿ ಪ್ಲೇ ಮಾಡಿದರೆ, ಆ ವಿಡಿಯೋದಲ್ಲಿ ಮುಂದೆ ಕಾಣಿಸಿಕೊಳ್ಳಬಹುದಾದ ಎಲ್ಲ ಜಾಹೀರಾತುಗಳನ್ನು ಬ್ಲಾಕ್‌ ಮಾಡುತ್ತದೆ. ಇದು ಕೇವಲ ಡೆಸ್ಕ್‌ಟಾಪ್‌ ಬ್ರೌಸರ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ.

ಚಂದಾದಾರಿಕೆ ಪಡೆದುಕೊಳ್ಳಿ:

ಜಾಹೀರಾತುಗಳ ಕಿರಿಕಿರಿ ಬೇಡ ಎನ್ನುವವರು, ಹಣ ತೆತ್ತು ಯೂಟ್ಯೂಬ್‌ ಪ್ರೀಮಿಯಂ ಖಾತೆಯ ಚಂದಾದಾರಿಕೆ ಪಡೆದುಕೊಳ್ಳಬಹುದು. ಫ್ರೀ ಖಾತೆಯಲ್ಲಿ ಇಲ್ಲದ ಸವಲತ್ತುಗಳು, ಯೂಟ್ಯೂಬ್‌ ಪ್ರೀಮಿಯಂನಲ್ಲಿವೆ. ಇದುವರೆಗೂ ಅದಕ್ಕೆ ಹಣ ತೆರಲು ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್‌ ಕಾರ್ಡ್‌ಆಯ್ಕೆಗಳು ಮಾತ್ರವೇ ಇದ್ದವು. ಆದರೆ ಈಗ ಯುಪಿಐ ಮೂಲಕವೂ ಶುಲ್ಕ ಸಂದಾಯ ಮಾಡಬಹುದಾಗಿದೆ. ಇದರಲ್ಲಿ ಯೂಟ್ಯೂಬ್‌ ಮ್ಯೂಸಿಕ್‌ನ ಭಂಡಾರದಲ್ಲಿರುವ ಹಾಡುಗಳನ್ನು ಕೇಳಬಹುದು. ಜೊತೆಗೆ ಯೂಟ್ಯೂಬ್‌ ಒರಿಜಿನಲ್ಸ್‌ ಸರಣಿಯಲ್ಲಿರುವ ಧಾರಾವಾಹಿಗಳನ್ನು ವೀಕ್ಷಿಸಬಹುದು.

You cannot copy content from Baravanige News

Scroll to Top