ನಾಡು ನುಡಿಯ ಬಗ್ಗೆ ಅಭಿಮಾನ ಸಾರುವ ಕೋಟಿ ಕಂಠ ಗಾಯನ!

ನಾಡು ನುಡಿಯ ಬಗ್ಗೆ ಅಭಿಯಾನ ಮೂಡಿಸುವ,ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವ ಗೀತೆ, ಕವನಗಳನ್ನು ನಾಡಿನ ಹೆಮ್ಮೆಯ ಕವಿಗಳು ರಚಿಸಿದ್ದು, ಇವುಗಳ ಕೇಳುವಿಕೆಯು ನಮ್ಮಲ್ಲಿ ಅಭಿಮಾನವನ್ನು ಮೂಡಿಸುತ್ತದೆ. ಈ ದೃಷ್ಟಿಯಿಂದ ಅಕ್ಟೋಬರ್ 28 ರಂದು “ಕೋಟಿ ಕಂಠ ಗೀತಗಾಯನ” ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಆಯೋಜಿಸಲಾಗುತ್ತಿದ್ದು, ಈ ವಿಶೇಷ ಕಾರ್ಯಕ್ರಮದ ವಿವರಗಳು ಕೆಳಕಂಡಂತಿದೆ.

“ ನನ್ನ ನಾಡು – ನನ್ನ ಹಾಡು ‘ ಸಮೂಹ ಗೀತಗಾಯನ – ಅಕ್ಟೋಬರ್ 28 ರಂದು ಶುಕ್ರವಾರ ಕನ್ನಡ ನಾಡು-ನುಡಿಯ ಶ್ರೇಷ್ಠತೆಯನ್ನು ಸಾರುವ


1.ನಾಡಗೀತೆಯಾದ ‘ಜಯ ಭಾರತ ಜನನೀಯ ತನುಜಾತೆ’

2.’ಉದಯ ವಾಗಲಿ ನಮ್ಮ ಚೆಲುವ ಕನ್ನಡ ನಾಡು

3. ‘ಬಾರಿಸು ಕನ್ನಡ ಡಿಂಡಿಮವ’

4. ‘ಹಚ್ಚೇವು ಕನ್ನಡದ ದೀಪ’

5. ‘ವಿಶ್ವ ವಿನೂತನ ವಿದ್ಯಾಚೇತನ’

6. ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’

ಈ ಗೀತೆಗಳನ್ನು ಬೆಳಗ್ಗೆ:11.00 ಗಂಟೆಗೆ ಏಕಕಾಲದಲ್ಲಿ ಹಾಡಲಾಗುವುದು.

Scroll to Top