ಕಟಪಾಡಿ: ಕಾಳಿಕಾಂಬ ವಿಶ್ವಕರ್ಮ ದೇಗುಲಕ್ಕೆ ಧಾರ್ಮಿಕ ಚಿಂತನೆಯ ಪಾದಯಾತ್ರೆ

ಕಟಪಾಡಿ: ತೆಂಕಾರು ಮಾಗಣೆ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆಯ ಮೂಲಕ ಆಗಮಿಸಿದ ಮಟ್ಟಾರು ಕಡಂಬು ವಿಶ್ವಕರ್ಮ ಸಮಾಜ ಸೇವಾ ಸಂಘವು ಪ್ರಾರ್ಥನೆ ಸಲ್ಲಿಸಿ ನಂತರ ದೇಗುಲದ ವತಿಯಿಂದ ಗೌರವವನ್ನು ಸ್ವೀಕರಿಸಿದರು.

ಸಂಘದ ದಶಮಾನೋತ್ಸವ ಪ್ರಯುಕ್ತ ಧಾರ್ಮಿಕ ಚಿಂತನೆಯೊಂದಿಗೆ ರವಿವಾರ ಬೆಳಗ್ಗೆ ಪಾದಯಾತ್ರೆ ಆರಂಭಿಸಿದ್ದು ಮಟ್ಟಾರು ಮೂಲಕ ಶಿರ್ವ ಶ್ರಿ ಸಿದ್ದಿ ವಿನಾಯಕ ದೇವಸ್ಥಾನ, ಬಂಟಕಲ್ಲು ಶ್ರೀ ದುರ್ಗಾ ಪರಮೇಶ್ವರಿ ದೇಗುಲ, ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಮುಖ್ಯಪ್ರಾಣ ದೇಗುಲದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ವಿಶ್ವ ಬ್ರಾಹ್ಮಣ ಯುವ ಸಂಘಟನೆ ಕಾಪು, ಯುವಸಂಗಮ ಶಿರ್ವ ಸಹಿತ ವಿವಿಧ ಸಂಘ ಸಂಸ್ಥೆ ದೇಗುಲದ ಆಡಳಿತ ಮಂಡಳಿಯು ಸಹಕರಿಸಿದೆ ಎಂದು ಸಂಘದ ಅಧ್ಯಕ್ಷ ಚೇತನ್ ಕುಮಾರ್ ಕಡಂಬು ಪ್ರತಿಕ್ರಿಯಿಸಿದರು.

16 ಕಿ ಮೀ ನಡೆದ ಈ ಪಾದಯಾತ್ರೆಯಲ್ಲಿ ಸಂಘದ ಗೌರವಾಧ್ಯಕ್ಷ ಗೋಪಾಲ ಆಚಾರ್ಯ, ಉಪಾಧ್ಯಕ್ಷ ಸೀತಾರಾಂ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಸಾಗುಮನೆ, ಕೋಶಾಧಿಕಾರಿ ದೀಪಕ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Scroll to Top