ಪಡುಬಿದ್ರಿ : ತಾಯಿ ಮತ್ತು ಮಗ ನಾಪತ್ತೆ!

ಪಡುಬಿದ್ರಿ, ಅ 31: ಪತ್ನಿ ಹಾಗೂ ಮಗು ನಾಪತ್ತೆಯಾಗಿರುವುದಾಗಿ ಪತಿ ಶ್ರೀಕಾಂತ್ ಹರಿಜನ ಎಂಬವರು ಪಡುಬಿದ್ರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

  • ಪಡುಬಿದ್ರೆಯ ಸುಣ್ಣದ ಗೂಡು ಬಳಿ ಇಮ್ರಿಯಾಜ್ ಎಂಬವರ ಮನೆಯಲ್ಲಿ ಬಾಡಿಗೆಗಿದ್ದ ಟಿಪ್ಪರ್ ಚಾಲಕ ಶ್ರೀಕಾಂತ್ ಅವರ ಪತ್ನಿ ದೀಪಾ(28) ಹಾಗೂ ಮಗ ಮನೆಯಿಂದ ಹೊರಹೋದವರ ವಾಪಾಸ್ ಆಗಿಲ್ಲ ಎಂದು ದೂರು ನೀಡಲಾಗಿದೆ. ಇವರು 9 ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದು, ಕಳೆದೊಂದು ವರ್ಷದ ಹಿಂದೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಜಗಳವಾಗುತ್ತಿತ್ತು.
  • ಅ. 22 ರಂದು ದೀಪಾ ಮನೆಯವರು ಬಂದು ದಂಪತಿಗಳಿಗೆ ಬುದ್ದಿ ಹೇಳಿ ಹೋಗಿದ್ದರು. ಆ ಬಳಿಕ ಅನೋನ್ಯವಾಗಿದ್ದು ಶ್ರೀಕಾಂತ್ ಕೆಲಸಕ್ಕೆ ಹೋಗಿದ್ದ ಪತ್ನಿಗೆ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಹೀಗಾಗಿ ನೆರೆಮನೆಯವರನ್ನು ವಿಚಾರಿಸಿದಾಗ ಚಿಲಕ ಹಾಕಿರುವ ವಿಚಾರ ತಿಳಿಸಿದ್ದರು.
  • ಕೆಲಸಕ್ಕೆ ಹೋಗಿದ್ದ ಶ್ರೀಕಾಂತ್ ಮನೆಗೆ ಬಂದು ನೋಡಿದಾಗ ಬಾಗಿಲು ಚಿಲಕ ಹಾಕಿದ್ದು ಮನೆಯ ಒಳಗಡೆ ಹೋದಾಗ ಪತ್ನಿ ಮತ್ತು ಮಗ ಇರಲಿಲ್ಲ. ಅಕ್ಕ ಪಕ್ಕದವರನ್ನು, ಸಂಬಂಧಿಕರನ್ನು ವಿಚಾರಿಸಿ ಎಲ್ಲಿಗೂ ಹೋಗದೆ ಇರುವುದನ್ನು ಗಮನಿಸಿ ಪತ್ನಿ ಮತ್ತು ಮಗ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದಾರೆ.

You cannot copy content from Baravanige News

Scroll to Top