ಇನ್‌ಸ್ಟಾಗ್ರಾಂ: ಭಾರತ ಸೇರಿ ವಿಶ್ವದಲ್ಲೇ ಸರ್ವರ್ ಸಮಸ್ಯೆ, ಹಲವರ ಖಾತೆ ಸಸ್ಪೆಂಡ್!

ಸಾಮಾಜಿಕ ಜಾಲತಾಣಗಳ ಪೈಕಿ ಫೋಟೋ ಶೇರಿಂಗ್ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಂ ಮತ್ತೆ ಸರ್ವರ್ ಸಮಸ್ಯೆ ಎದುರಿಸಿದೆ. ಆದರೆ ಈ ಬಾರಿ ಸರ್ವರ್ ಸಮಸ್ಯೆ ಜೊತೆ ಬಳಕೆದಾರರಿಗೆ ಶಾಕ್ ನೀಡಿದೆ. ಒಂದೆಡೆ ಇನ್‌ಸ್ಟಾಗ್ರಾಂ ಬಳಕೆದಾರರು ಸರ್ವರ್ ಡೌನ್ ಸಮಸ್ಯೆ ಎದುರಿಸಿದರೆ, ಮತ್ತೊಂದೆಡೆ ಹಲವರ ಖಾತೆಗಳು ಅಮಾನತುಗೊಂಡಿದೆ.

ಈ ಕುರಿತು ಈಗಾಗಲೇ ಬಳೆಕೆದಾರರು ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ. ವಿಶ್ವದ ಬಹುತೇಕ ಕಡೆಗಳಲ್ಲಿ ಇನ್‌ಸ್ಟಾಗ್ರಾಂ ಸರ್ವರ್ ಸಮಸ್ಯೆ ಎದುರಿಸಿದೆ. ಬಳಕೆದಾರರು ಖಾತೆ ಲಾಗಿನ್ ಆಗಲು ಸಾಧ್ಯವಾಗಿಲ್ಲ. ಇದರ ಬೆನ್ನಲ್ಲೇ ಹಲವರ ಖಾತೆಗಳು ಅಮಾನತುಗೊಂಡಿರುವುದು ಬೆಳಕಿಗೆ ಬಂದಿದೆ.

3,000ಕ್ಕೂ ಹೆಚ್ಚು ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಸರ್ವರ್ ಸಮಸ್ಯೆ ಎದುರಾಗಿದೆ. ಇದರ ಬೆನ್ನಲ್ಲೇ ಹಲವು ಟ್ವಿಟರ್ ಮೂಲಕ ಇನ್‌ಸ್ಟಾಗ್ರಾಂ ಡೌನ್ ಎಂದು ದೂರು ನೀಡಿದ್ದಾರೆ. ಸರ್ವರ್ ಡೌನ್ ಬೆನ್ನಲ್ಲೇ ಹಲವರು ಖಾತೆಗಳು ಅಮಾನತ್ತಾಗಿದೆ. ಹೀಗಾಗಿ ಟ್ವಿಟರ್‌ನಲ್ಲಿ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವರಿಗೆ ಎಚ್ಚರಿಕೆ ಸಂದೇಶದ ಮೂಲಕ ಖಾತೆಯನ್ನು ಅಮಾನತುಗೊಳಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರ ದೂರು ಹೆಚ್ಚಾಗುತ್ತಿದ್ದಂತೆ ಇನ್‌ಸ್ಟಾಗ್ರಾಂ ಖುದ್ದು ಪ್ರತಿಕ್ರಿಯೆ ನೀಡಿದೆ. ಹಲವರಿಗೆ ಇನ್‌ಸ್ಟಾಗ್ರಾಂ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ ಅನ್ನೋದು ನಮ್ಮ ಗಮನಕ್ಕೆ ಬಂದಿದೆ. ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ಅಡಚಣೆಗಾಗಿ ಕ್ಷಮಿಸಿ ಎಂದು ಇನ್‌ಸ್ಟಾಗ್ರಾಂ ಹೇಳಿದೆ. ಇಷ್ಟೇ ಅಲ್ಲ ಯಾರ ಖಾತೆಗಳು ಅಮಾನತ್ತಾಗಿದೆ, ಅವರ ಇಮೇಲ್ ಐಡಿ ಸೇರಿದಂತೆ ಕೆಲ ಮಾಹಿತಿಗಳನ್ನು ಕೇಳಿದೆ.

Scroll to Top