ದ. ಕ, ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ, ಪ್ರತಿಭಟನೆಯನ್ನೂ ನಡೆಸಲಾಗಿತ್ತು. ವಿದ್ಯಾರ್ಥಿಗಳ ವಾದ ವಿವಾದ ತಾರಕಕ್ಕೇರಿತ್ತು.
ಇದೀಗ ಹೈಕೋರ್ಟ್ ಹಿಜಾಬ್ ಧಾರಣೆ ಕುರಿತಂತೆ ಮಹತ್ವದ ತೀರ್ಪನ್ನು ನೀಡಿದೆ. ಸಮವಸ್ತ್ರ ಜತೆಗೆ ಹಿಜಾಬ್ ಧರಿಸಲು ಕೋರಿದ್ದ ಎಲ್ಲಾ ರಿಟ್ ಗಳನ್ನು ಹೈಕೋರ್ಟ್ ವಜಾಗೊಳಿಸಿದ್ದು, ಸರ್ಕಾರದ ಸಮವಸ್ತ್ರವನ್ನೇ ಎತ್ತಿಹಿಡಿದಿದೆ.ಇಸ್ಲಾಂ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯವೇ ಅಲ್ಲ, ಹಾಗಾಗಿ ಶಾಲಾ ಕಾಲೇಜುಗಳಲ್ಲಿ ವಿದ್ಯೆ ಮೊದಲಾಗಬೇಕೇ ಹೊರತು ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಯೇ ಪ್ರವೇಶಿಸಬೇಕು ಎಂಬ ತೀರ್ಪನ್ನು ಹೊರಡಿಸಿದೆ.
ಹೈಕೋರ್ಟ್ ತ್ರಿಸದಸ್ಯ ಪೀಠದಿಂದ ಮಹತ್ವದ ತೀರ್ಪು ಹೊರಬಿದ್ದಿದ್ದು, ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಂತೆಯೂ ಹೇಳಲಾಗಿದೆ.