ಪಡುಬೆಳ್ಳೆ (ಡಿ. 10) : ZIZO Education ವತಿಯಿಂದ Biggest Dance Competition

ಪಡುಬೆಳ್ಳೆ : ZIZO Education ಅರ್ಪಿಸುವ Let’s Nacho ಅನ್ನುವ ವಿಭಿನ್ನ ನೃತ್ಯ ಸ್ಪರ್ಧೆ ಡಿ. 10ರಂದು ಸಂಜೆ 6 ಗಂಟೆಯಿಂದ ಪಡುಬೆಳ್ಳೆಯ ಶ್ರೀ ನಾರಾಯಣ ಗುರು ಇಂಗ್ಲಿಷ್ ಮೀಡಿಯಂ ಶಾಲಾ ಮೈದಾನದಲ್ಲಿ ನಡೆಯಲಿದೆ. ಚಲನಚಿತ್ರ ತಂಡದ ಸ್ಟಾರ್ ಸೆಲೆಬ್ರೆಟಿಗಳು ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.

ಜಿಲ್ಲಾ ಮಟ್ಟದ ಅತೀ ದೊಡ್ಡ ಡಾನ್ಸಿಂಗ್ ವೇದಿಕೆಯಲ್ಲಿ ವೈಯಕ್ತಿಕ ಹಾಗೂ ಸಮೂಹ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು ವೈಯಕ್ತಿಕ ವಿಭಾಗದ ವಿಜೇತರಿಗೆ ಪ್ರಥಮ ಬಹುಮಾನವಾಗಿ ರೂ. 3000 ಹಾಗೂ ದ್ವಿತೀಯ ಬಹುಮಾನ ರೂ. 1500 ಜತೆಗೆ ಟ್ರೋಫಿ ಹಾಗೆಯೇ ಸಮೂಹ ವಿಭಾಗದಲ್ಲಿ ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ ರೂ 8000 ಮತ್ತು ದ್ವಿತೀಯ ಬಹುಮಾನ ರೂ 4000 ಹಾಗೂ ಟ್ರೋಫಿ ಹಾಗೆಯೇ ಪ್ರೋತ್ಸಾಹಕವಾಗಿ ಎರಡು ಬಹುಮಾನಗಳನ್ನು ನೀಡಲಾಗುವುದು ಎಂದು ZIZO ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೈಯಕ್ತಿಕ ಸ್ಪರ್ಧೆಯಲ್ಲಿ ಭಾಗವಹಿಸುವವರು ರೂ. 200 ಹಾಗೂ ಸಮೂಹ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡ ರೂ. 500 ಪ್ರವೇಶ ಶುಲ್ಕ ಪಾವತಿಸಿ ಡಿ. 6ರ ಒಳಗಾಗಿ ತಮ್ಮ ತಂಡದ ವಿವರಗಳನ್ನು ನೀಡುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 7676921592, [email protected]

You cannot copy content from Baravanige News

Scroll to Top