ಹಿಜಾಬ್ ಇಲ್ಲದೇ ಎಕ್ಸಾಂ ಬರೆಯಲ್ಲ!!..’ಹೈ’ತೀರ್ಪು ಬಂದ ಮೇಲೂ ತಕರಾರು – ಹೈಕೋರ್ಟ್ ತೀರ್ಪಿನ ಮೇಲೆ ಉಡುಪಿ ವಿದ್ಯಾರ್ಥಿನಿಯರ ಅಸಮಾಧಾನ

ಹಿಜಾಬ್ ಗೆ ಸರ್ಕಾರ ಮತ್ತು ಹೈಕೋರ್ಟ್ ಕಡೆಯಿಂದ ಫುಲ್ ಸ್ಟಾಪ್ ಸಿಕ್ಕಿದ್ದರೂ ಕೂಡಾ ಈ ಬಗ್ಗೆ ಮತ್ತೆ ವಿವಾದ ಮುಂದುವರೆದಿದೆ. “ಹಿಜಾಬ್ ಇಲ್ಲದೇ ಎಕ್ಸಾಂ ಬರೆಯಲ್ಲ” – ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.

‘ಹೈ’ ತೀರ್ಪು ಹೊರಬಿದ್ದಿದ್ದು, ಐತಿಹಾಸಿಕ ನೆಲೆಯಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದರೂ ಮುಸ್ಲಿಂ ವಿದ್ಯಾರ್ಥಿಗಳು ಇದನ್ನು ಒಪ್ಪಿಕೊಳ್ಳಲು ತಯಾರಿಲ್ಲ.. ಹಿಜಾಬ್ ಇಲ್ಲದೇ ಕಾಲೇಜಿಗೆ ಹೋಗಲು ಸಾಧ್ಯವೇ ಇಲ್ಲ ಎಂದು ಹಠ ಹಿಡಿದಿದ್ದಾರೆ.

ಯಾದಗಿರಿಯಲ್ಲೂ ಹಿಜಾಬ್ ಅವಕಾಶ ನೀಡದ ಕಾರಣ 35 ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ತೆರಳಿರುವ ಘಟನೆಯೂ ಬೆಳಕಿಗೆ ಬಂದಿದೆ.

ಇನ್ನು ಉಡುಪಿಯಲ್ಲಂತೂ ಈ ಬಗ್ಗೆ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ನಲ್ಲೂ ಪ್ರತಿಭಟಿಸಲು ತಯಾರಾಗಿದ್ದಾರೆ. ಉಡುಪಿ ವಿದ್ಯಾರ್ಥಿಗಳು ಈ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಎಸ್ ಡಿ ಪಿ ಐ ಮತ್ತು ಮುಸ್ಲಿಂ ಮುಖಂಡರು ಕೂಡಾ ಈ ತೀರ್ಪಿನ ಬಗ್ಗೆ ತಮ್ಮ ಭಾರೀ ಅಸಮಾಧಾನ್ನು ವ್ಯಕ್ತಪಡಿಸುತ್ತಿದ್ದು ಹಿಜಾಬ್ ಫೈಟ್ ಮತ್ತೆ ಮುಂದುವರಿಯುತ್ತಿದೆ.

ಹೈಕೋರ್ಟ್ ತೀರ್ಪನ್ನು ಗೌರವಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂಡಾ ಹೇಳಿಕೆ ನೀಡಿದ್ದು, ಇಷ್ಟೆಲ್ಲಾ ಆದ ಬಳಿಕವೂ ಇಲ್ಲಿಗೇ ನಿಲ್ಲೋದಿಲ್ವಾ ಫೈಟ್? ಎನ್ನುವುದು ಕಟ್ಟ ಕಡೆಗೆ ಎಲ್ಲರಲ್ಲೂ ಮೂಡಿರುವ ಪ್ರಶ್ನೆಯಾಗಿದೆ.

Scroll to Top