ನಾರಾಯಣ ಗುರು ಅಭಿವೃದ್ಧಿ ಕೋಶ ಬೇಡ, ನಿಗಮ ಕೊಡಿ: ಸಿಎಂಗೆ ಬಿಲ್ಲವ ಮುಖಂಡರ ಮನವಿ

ಉಡುಪಿ: ಕಾಪುವಿನಲ್ಲಿ ನಡೆಯಲಿರುವ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲು ಉಡುಪಿಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಟಪಾಡಿಗೆ ಭೇಟಿ ನೀಡಿ ನಾರಾಯಣ ಗುರುಗಳಿಗೆ ಪುಷ್ಪಾರ್ಚನೆ ಮಾಡಿದರು.

ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿ ಪ್ರಸಾದ ಸ್ವೀಕರಿಸಿದರು. ಮಾಜಿ ಸಿಎಂ ಯಡಿಯೂರಪ್ಪ, ಸುನೀಲ್ ಕುಮಾರ್, ಕಾರಜೋಳ, ಅಂಗಾರ, ಕೋಟ ಶ್ರೀನಿವಾಸ ಪೂಜಾರಿ ಅವರು ಕೂಡಾ ಮುಖ್ಯಮಂತ್ರಿಗಳೊಂದಿಗೆ ಉಪಸ್ಥಿತರಿದ್ದರು.

ಈ ಸಂದರ್ಭ ಬಿಲ್ಲವ, ಈಡಿಗ ನಿಗಮ ಮಾಡಬೇಕೆಂದು ಬಿಲ್ಲವ ನಾಯಕರು ಸಿಎಂ ಅವರನ್ನು ಒತ್ತಾಯಿಸಿದರು. ನಾರಾಯಣ ಗುರು ಅಭಿವೃದ್ಧಿ ಕೋಶ ಬೇಡ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ, ನಾರಾಯಣ ಗುರು ಅಭಿವೃದ್ಧಿ ಕೋಶವನ್ನು ಅನುಭವಿಸಿ ನೋಡಿ, ಸರಕಾರ ರಚಿಸಿರುವ ಕೋಶದ ಸದುಪಯೋಗ ಪಡೆಯಿರಿ. ನಾರಾಯಣ ಗುರು ಅಭಿವೃದ್ಧಿ ಕೋಶದ ಮೂಲಕ ವಿಶೇಷ ಅನುದಾನಗಳು ಬಿಲ್ಲವ ಸಮುದಾಯಕ್ಕೆ ಸಿಗಲಿದೆ ಎಂದರು.

You cannot copy content from Baravanige News

Scroll to Top