“ನಾನು ಗಡಿನಾಡ ಕನ್ನಡಿಗ” ಅಂದಿದ್ದೇ ತಪ್ಪಾಯ್ತ? ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿಗೆ ಬೆದರಿಕೆ – ದೂರು

ಮಂಗಳೂರು: ರಿಯಾಲಿಟಿ ಶೋ ’ಬಿಗ್ ಬಾಸ್ ’ ಸ್ಪರ್ಧಿ ರೂಪೇಶ್ ಶೆಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿರುವ ಬಗ್ಗೆ ಅವರ ಕುಟುಂಬಸ್ಥರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಬಿಗ್ ಬಾಸ್ ಶೋನಲ್ಲಿ ರೂಪೇಶ್ “ನಾನು ಗಡಿನಾಡ ಕನ್ನಡಿಗ” ಎಂದು ಹೇಳಿದ್ದರು, ಇದಕ್ಕೆ ತುಳು ಹೋರಾಟಗಾರರ ತೀವ್ರ ವಿರೋಧ ವ್ಯಕ್ತವಾಯಿತು. ವೋಟ್ ಮಾಡಲು ತುಳುವರು ಬೇಕು, ಚಲನಚಿತ್ರಕ್ಕೆ ವೀಕ್ಷಕರು ತುಳುವರು ಬೇಕು, ಆದರೆ ಬಿಗ್ ಬಾಸ್ ಶೋನಲ್ಲಿ ಮಾತ್ರ ನಾನು “ಗಡಿನಾಡ ಕನ್ನಡಿಗ”, ಇದೇನಾ ತುಳುನಾಡಿಗೆ ಕೊಡುವ ಗೌರವ? ಎಂಬುದಾಗಿ ಸಾಕಷ್ಟು ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆದಿತ್ತು.

ಈ ಹೇಳಿಕೆಯನ್ನು ಉಲ್ಲೇಖಿಸಿ ಕೆಲವರು ಬೆದರಿಕೆ ಹಾಕಿದ್ದಾರೆ, ರೂಪೇಶ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ರೂಪೇಶ್ ಕುಟುಂಬಸ್ಥರು ದೂರಿನಲ್ಲಿ ಆರೋಪಿಸಿದ್ದಾರೆ. ಸೆನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

You cannot copy content from Baravanige News

Scroll to Top