ಶಿರ್ವ : ಹಿಂದೂ ಪದವಿ ಪೂರ್ವ ಕಾಲೇಜು ಶಿರ್ವ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲಾ ಸಂಯುಕ್ತಾಶ್ರಯದಲ್ಲಿ ನ.25ರಂದು ಬೆಳಿಗ್ಗೆ 10 ಗಂಟೆಯಿಂದ ಜಾನಪದ ಕಲರವ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಜಾನಪದ ಕಲಾ ಪ್ರಕಾರಗಳನ್ನು ಮತ್ತಷ್ಟು ಜೀವಂತವಾಗಿಸುವ ನಿಟ್ಟಿನಲ್ಲಿ ಸಂಘಟಕರಾದ ಶ್ರೀ ಗಣೇಶ್ ಶೆಟ್ಟಿ ಹಾಗೂ ಶಾಲಾ ಶಿಕ್ಷಕ-ಶಿಕ್ಷಕಿಯರು ಜೊತೆಗೂಡಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಹಿಂದೂ ಪ್ರೌಢಶಾಲೆಯ 14 ತಂಡಗಳಲ್ಲಿ 125 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂ ಜಾನಪದ ಕಲರವದಲ್ಲಿ ಏನೇನಿದೆ?
ಕಂಗಿಲು, ಕಂಸಾಳೆ, ವೀರಗಾಸೆ, ಪೂಜಾ ಕುಣಿತ, ಭಜನೆ,ಯಕ್ಷಗಾನ, ಕೋಲಾಟ, ಹುಲಿ ಕುಣಿತ, ಚೆಂಡೆ, ನಾಸಿಕ್ ಬ್ಯಾಂಡ್, ಕೀಲು ಕುದುರೆ, ಕಂಬಳ, ಎನ್ ಸಿ ಸಿ, ಕೋಳಿ ಅಂಕದಂತಹ ಜಾನಪದ ಕಲಾ ಸೊಗಡುಗಳಿವೆ ಎಂದಿದ್ದಾರೆ.
ಸುಮಾರು ಎರಡು ಲಕ್ಷ ವೆಚ್ಚದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ವಿದ್ಯಾರ್ಥಿಗಳಲ್ಲಿ ಬೇಸರಿಕೆಯನ್ನು ಹೋಗಲಾಡಿಸಿ, ಬೇರೆ ಬೇರೆ ಕಡೆಯ ಜಾನಪದ ಕಲೆಯ ಬಗ್ಗೆ ಒಲವು ಮೂಡಿಸಿ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದು ಸಂಘಟಕರೂ ಹಾಗೂ ಶಿಕ್ಷಕರೂ ಆಗಿರುವ ಶ್ರೀ ಗಣೇಶ್ ಶೆಟ್ಟಿ ಹೇಳಿದ್ದಾರೆ.