ಮಟ್ಟಾರಿನ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಯೊಬ್ಬರಿಗೆ ಸೀಮಂತ ಮಾಡಿಸುವ ಮೂಲಕ ವಿಶಷ್ಟವಾಗಿ ಮಕ್ಕಳ ದಿನಾಚರಣೆ!

ಉಡುಪಿ : ಶಿರ್ವ ಮಟ್ಟಾರಿನ ಧರ್ಮೇಟ್ಟು ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆಯು ಬಹಳ ಸಂಭ್ರಮದಿಂದ ನಡೆಯಿತು. ವಿಶೇಷವಾಗಿ ಗ್ರಾಮಸ್ಥರಾದ ಇಂದಿರಾ, ವಿನಯ, ಮಮತಾ, ಪುಷ್ಪಾ ಇವರು ಊಟದ ವ್ಯವಸ್ಥೆಯನ್ನು ಮಾಡಿದ್ರೆ ಊರಿನ ದಾನಿಗಳಾದ ರಮೇಶ್ ಶೆಟ್ಟಿ ಯವರು ಮಕ್ಕಳಿಗೆ ಸ್ಲೇಟ್ ಮತ್ತು ಬರಹಕ್ಕೆ ಕಡ್ಡಿಯನ್ನು ಉಡುಗೊರೆಯಾಗಿ ನೀಡಿದರು.

ಇದರಲ್ಲೂ ವಿಶೇಷ ಎಂದರೆ ಗ್ರಾಮದ ಗರ್ಭಿಣಿ ಮಹಿಳೆಯೊಬ್ಬರಿಗೆ ಊರಿನ ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರು ಮತ್ತು ಗ್ರಾಮಸ್ಥರ ವತಿಯಿಂದ ಸೀಮಂತ ಕಾರ್ಯಕ್ರಮ ನಡೆಯಿತು. ಮಕ್ಕಳ ದಿನಾಚರಣೆಯ ಕೇಕ್ ವ್ಯವಸ್ಥೆ ಯನ್ನು ಮಮತಾ ರಮೇಶ್ ಶೆಟ್ಟಿ ಮಾಡಿದ್ದರು.

ಸ್ವೀಟ್ ಮತ್ತು ಐಸ್ ಕ್ರೀಮ್ ವ್ಯವಸ್ಥೆಯನ್ನು ಸುರೇಖಾ, ಮಲ್ಲಿಕಾ, ಸುಂದರಿ ಮೂಲ್ಯ, ಕೋಸಿ, ಉಲ್ಲು ಪರ್ಬುಲು, ಗೀತಾ ಸಿಸ್ಟರ್,ಸ್ತ್ರೀ ಶಕ್ತಿ ಗುಂಪುಗಳಾದ ಶ್ರೀನಿಧಿ, ಸ್ಫೂರ್ತಿ, ಜ್ಯೋತಿಶ್ರೀ ಹಾಗೂ ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರು ಮಾಡಿದರು.

ಅಂತೂ ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳ ಹಬ್ಬ ಹಾಗೂ ಸೀಮಂತ ಕಾರ್ಯಕ್ರಮ ವಿಜೃಂಭಣೆ ಯಿಂದ ಅರ್ಥಪೂರ್ಣವಾಗಿ ನಡೆಯಿತು.

You cannot copy content from Baravanige News

Scroll to Top