Meesho ಆ್ಯಪ್ ಆವಾಂತರ! ಚೂಡಿದಾರ್ ಬದಲಿಗೆ ಬಂತು ಹಳೆಯ ಬಿಸಾಕಿದ ಒಂದು ಕಾಲಿನ ಪ್ಯಾಂಟ್

ಪುತ್ತೂರು: ವ್ಯಕ್ತಿಯೋರ್ವರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಚೂಡಿದಾರ್ ಬದಲಾಗಿ ಹಳೆಯ ಪ್ಯಾಂಟನ್ನು ತುಂಡು ಮಾಡಿ ಪ್ಯಾಂಟಿನ ಒಂದು ಕಾಲನ್ನು ಮಾತ್ರ ಕಳುಹಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಸರ್ಕಾರಿ ಉದ್ಯೋಗಿ ಮಮತಾ ಎಂಬವರು ಮೀಶೋ ಆ್ಯಪ್ ಮೂಲಕ ರೂ.664 ದರದ ಚೂಡಿದಾರ್ ಒಂದನ್ನು ಆರ್ಡರ್ ಮಾಡಿದ್ದರು. ಆನ್‌ಲೈನ್‌ನಲ್ಲೇ ಪೇಮೆಂಟ್ ಕೂಡಾ ಮಾಡಿದ್ದರು.ಅದರಂತೆ ಪಾರ್ಸೆಲ್ ಕೂಡಾ ಬಂದಿದೆ. ಆದರೆ ಅದನ್ನು ಓಪನ್ ಮಾಡುವಾಗ ಮಾತ್ರ ಯಾವುದೋ ಹಳೆಯ ಪ್ಯಾಂಟಿನ ಒಂದು ಕಾಲು ಮಾತ್ರ ಇರುವ ಬಟ್ಟೆಯನ್ನು ಕಳುಹಿಸಿಕೊಡಲಾಗಿತ್ತು.

ಜನಪ್ರಿಯವಾಗಿರುವ ಮೀಶೋ ಶಾಪಿಂಗ್ ಆ್ಯಪ್‌ನಲ್ಲೇ ಈ ಘಟನೆ ನಡೆದಿದ್ದು ಜನರು ಎಚ್ಚರಿಕೆಯಿಂದ ಶಾಪಿಂಗ್ ಮಾಡಬೇಕಾಗಿದೆ.

You cannot copy content from Baravanige News

Scroll to Top