ತುಳು ಭಾಷೆಯಲ್ಲೂ ರಿಲೀಸ್ ಆಗಲಿದೆ ‘ಕಾಂತಾರ’ ಸಿನಿಮಾ!

‘ಕಾಂತಾರ’ ಸಿನಿಮಾಗೂ ತುಳುನಾಡಿಗೂ ಸಂಬಂಧ ಇದೆ. ತುಳುನಾಡಿನಲ್ಲಿ ಆಚರಣೆಯಲ್ಲಿರುವ ದೈವಾರಾಧನೆಯ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ. ಇದು ಚಿತ್ರದ ಹೈಲೈಟ್ ಕೂಡ ಹೌದು. ಸಿನಿಮಾದ ಮೈಲೇಜ್ ಹೆಚ್ಚಲು ಸಿನಿಮಾದಲ್ಲಿ ತೋರಿಸಿರುವ ದೈವಗಳ ವಿವಾರವೂ ಕೂಡ ಪ್ರಮುಖವಾಗಿದೆ.

ಈಗ ‘ಕಾಂತಾರ’ ಚಿತ್ರವನ್ನು ತುಳುವಿಗೆ ಡಬ್ ಮಾಡಲಾಗುತ್ತಿದೆ. ಈ ವಿಚಾರವನ್ನು ಹೊಂಬಾಳೆ ಫಿಲ್ಮ್ಸ್​​ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರು ಖಚಿತಪಡಿಸಿದ್ದಾರೆ.ಇಡೀ ಸಿನಿಮಾದ ಕಥೆ ಸಾಗೋದು ತುಳುನಾಡಿನಲ್ಲಿ. ಸಿನಿಮಾದ ಕೆಲ ದೃಶ್ಯಗಳಲ್ಲಿ ತುಳು ಭಾಷೆ ಕೂಡ ಬಳಕೆ ಆಗಿದೆ. ತುಳುನಾಡಿನ ವಿಚಾರಗಳನ್ನು ಹೇಳುವ ಈ ಚಿತ್ರವನ್ನು ತುಳುವಿನಲ್ಲೇ ರಿಲೀಸ್ ಮಾಡುವ ಪ್ಲ್ಯಾನ್​ನಲ್ಲಿ ಚಿತ್ರತಂಡ ಇದೆ.

ಸದ್ಯ, ಡಬ್ಬಿಂಗ್ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೇ ತುಳುವಿನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ವಿಚಾರ ಕೇಳಿ ಕರಾವಳಿ ಮಂದಿ ಖುಷಿಪಟ್ಟಿದ್ದಾರೆ.

You cannot copy content from Baravanige News

Scroll to Top