ಕಳತ್ತೂರು: ಅಣ್ಣ ನನ್ನನ್ನು ಕರೆಯುತ್ತಿದ್ದಾನೆ ಎಂದು ಬಾವಿಗೆ ಹಾರಿ ಯುವಕ ಆತ್ಮಹತ್ಯೆ

ಶಿರ್ವ : ವಿಪರೀತ ಕುಡಿತದ ಚಟ ಹೊಂದಿದ್ದ ಯುವಕ ಕಳತ್ತೂರು ಶಾಂತಿಗುಡ್ಡೆ ರೈಸ್ ಮಿಲ್ ‌ಬಳಿಯ ದರ್ಕಾಸ್ ನಿವಾಸಿ ಸಚಿನ್ ಮೂಲ್ಯ(29)ನ.20 ರಂದು ತನ್ನ ಮನೆ ಸಮೀಪದ ನೆರೆಮನೆಯವರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸುಮಾರು 4 ವರ್ಷದ ಹಿಂದೆ ಈತನ ಅಣ್ಣನೂ ಇದೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅಣ್ಣ ನನ್ನನ್ನು ಕರೆಯುತ್ತಿದ್ದಾನೆ ನಾನು ಬಾವಿಗೆ ಹಾರುತ್ತೇನೆ ಎಂದು ಮನೆಯವರಲ್ಲಿ ಹೇಳಿ ಸಂಜೆ 4-30ರ ವೇಳೆಗೆ ಬಾವಿಗೆ ಹಾರಿದ್ದಾನೆ.

ಆಳವಾದ ಬಾವಿಯಲ್ಲಿ ಸುಮಾರು 25 ಅಡಿ ನೀರಿದ್ದು ಕಾಪುವಿನ ಸಮಾಜ ಸೇವಕ ಸೂರಿ ಶೆಟ್ಟಿ ಹಾಗೂ ದೆಂದೂರಿನ ಅಶೋಕ್ ಶೆಟ್ಟಿ ಮತ್ತು ತಂಡ ಮೃತ ದೇಹವನ್ನು ರಾತ್ರಿ ಬಾವಿಯಿಂದ ಮೇಲಕ್ಕೆತ್ತಿದ್ದು ಉಡುಪಿಯ ಶವಾಗಾರದಲ್ಲಿಡಲಾಗಿದೆ. ಶಿರ್ವ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top
)?$/gm,"$1")],{type:"text/javascript"}))}catch(e){d="data:text/javascript;base64,"+btoa(t.replace(/^(?:)?$/gm,"$1"))}return d}-->