ಬಂಟಕಲ್ಲು: ನಾಗರಿಕ ಸೇವಾ ಸಮಿತಿ ರಿ. ಬಂಟಕಲ್ಲು ಇವರ ಆಶ್ರಯದಲ್ಲಿಬಂಟಕಲ್ಲು ಅಂಚೆ ಕಛೇರಿಯಲ್ಲಿ ಸುಮಾರು 8 ವರ್ಷದಿಂದ ಪತ್ರ ಬಟಾವಾಡೆ ಮಾಡುತ್ತಿದ್ದ ಅಂಚೆಯಣ್ಣ ಚಿತ್ರಕಲಿ ಹಾಗೂ ಸುಮಾರು 20 ವರ್ಷಗಳಿಂದ ಹೇರೂರು ಅಂಚೆ ಕಛೇರಿಯಲ್ಲಿ ಪತ್ರ ಬಟಾವಾಡೆ ಮಾಡುತ್ತಿದ್ದ ಅಂಚೆಯಣ್ಣ ರಾಜೇಶ್ ಆಚಾರ್ಯ ಇವರು ತಮ್ಮ ವೃತ್ತಿಯಲ್ಲಿ ಅಂಚೆ ಇಲಾಖೆ ಯಿಂದ ಪದೋನ್ನತಿ ಹೊಂದಿ ಚಿತ್ರಕಲಿಯವರು ಶಂಕರಪುರ ಅಂಚೆ ಕಛೇರಿಗೆ ಹಾಗೂ ರಾಜೇಶ್ ರವರು ಕಟಪಾಡಿ ಅಂಚೆಕಛೇರಿಗೆ ವರ್ಗಾವಣೆ ಹೊಂದಿರುವ ಹಿನ್ನಲೆಯಲ್ಲಿ ಅವರನ್ನು ಅಭಿನಂದಿಸಿ ಬೀಳ್ಕೊಡುವ ಸರಳ ಕಾರ್ಯಕ್ರಮವು ಇಂದು ಬಂಟಕಲ್ಲು ಅಂಚೆ ಕಛೇರಿಯಲ್ಲಿ ಜರುಗಿತು.
ನಾಗರಿಕ ಸೇವಾ ಸಮಿತಿ ರಿ. ಬಂಟಕಲ್ಲು ಇದರ ಅಧ್ಯಕ್ಷ ಕೆ ಆರ್ ಪಾಟ್ಕರ್ ಅಂಚೆಯಣ್ಣನವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಅಂಚೆಯಣ್ಣನವರು ಬಂಟಕಲ್ಲು ಪರಿಸರಕ್ಕೆ ನೀಡಿದ ಸೇವೆಯನ್ನು ಶ್ಲಾಘಿಸಿ ಶುಭ ಹಾರೈಸಿ ಅಭಿನಂದಿಸಿದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಕಂಠಪಾಠ ವಿಭಾಗದಲ್ಲಿ ದ್ವಿತೀಯಾ ಸ್ಥಾನ ಪಡೆದ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅಭಿಜ್ಞಾ ಳನ್ನು ನಾಗರಿಕ ಸಮಿತಿ ವತಿಯಿಂದ ಅಭಿನಂದಿಸಲಾಯಿತು.
ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಮರಾಠೆಯವರು ಶುಭಶಂಶನೆ ಮಾಡಿದರು., ನಿವೃತ್ತ ಅಂಚೆ ಪಾಲಕ ಬಾಸ್ಕರ ಶೆಟ್ಟಿ, ಉದ್ಯಮಿ ರಾಮಚಂದ್ರ ನಾಯಕ್, ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್ ಬಂಟಕಲ್ಲು ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್,ಶಿರ್ವ ಗ್ರಾಮ ಪಂಚಾಯತ್ ಸದಸ್ಯೆ ವೈಲೆಟ್ ಕಸ್ತಲಿನೊ, ಮಜೂರು ಗ್ರಾಮ ಪಂ ಸದಸ್ಯೆ ಮಂಜುಳ ಆಚಾರ್ಯ, ಅಂಚೆ ಇಲಾಖೆಯ ಪ್ರಮೀಳಾ ಲೋಬೊ, ಬಂಟಕಲ್ಲು ಅಂಚೆಕಛೇರಿಯ ಅಂಚೆ ಪಾಲಕಿ ಲೂವಿಸ್ ಅರಾನ್ನಾ, ಮಮತಾ ಆಚಾರ್ಯ ಉದ್ಯಮಿ ರಾಮ ಶೆಟ್ಟಿ, ಜಯ ಶೆಟ್ಟಿ, ನಾಗರಿಕ ಸೇವಾ ಸಮಿತಿಯ ಜಗದೀಶ್ ಆಚಾರ್ಯ, ವಿರೇಂದ್ರ ಪಾಟ್ಕರ್, ವಿನ್ಸಂಟ್ ಕಸ್ತಲಿನೊ, ಮೊದಲಾದವರು ಉಪಸ್ಥಿತರಿದ್ದರು. ನಾಗರಿಕ ಸೇವಾ ಸಮಿತಿಯ ಕಾರ್ಯದರ್ಶಿ ದಿನೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.