ಆಳ್ವಾಸ್: ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಬಿಎಸ್ಸಿ ಆನಿಮೇಶನ್ ಮತ್ತು ವಿಎಫ್ಎಕ್ಸ್ ವಿಭಾಗದ ವತಿಯಿಂದ ಅರ್ಧ ದಿನದ ಮಾಹಿತಿ ಕಾರ್ಯಾಗಾರ ನಡೆಯಿತು.
ಯೂಟ್ಯೂಬ್ ಹಾಗೂ ಇತರೆ ಸಾಮಾಜಿಕ ಜಾಲತಾಣದ ಮೂಲಕ ತನ್ನ ವಿಭಿನ್ನ ಶೈಲಿಯ ಕಂಟೆಂಟ್ ಕ್ರಿಯೇಟಿಂಗ್ನಿಂದಾಗಿ ಮನೆಮಾತಾದ ಚಾನೆಲ್ ‘ಚರಿತ್ರೆ’. ಇದನ್ನು ಆರಂಭಿಸಿದ ನಿತಿನ್ ಪೂಜಾರಿ ಕಾಲೇಜಿಗೆ ಆಗಮಿಸಿ ಈ ಕಾರ್ಯಾಗಾರ ನಡೆಸಿಕೊಟ್ಟರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ, ಡಿಜಿಟಲ್ ಮಾಧ್ಯಮದ ಅವಕಾಶ, ಕಂಟೆಂಟ್ ಕ್ರಿಯೇಶನ್ ಹಾಗೂ ಜೀವನದ ಮೌಲ್ಯಗಳ ಬಗೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ ಕುರಿಯನ್, ವಿಭಾಗದ ಮುಖ್ಯಸ್ಥ ರವಿಚಂದ್ರ ಮೂಡುಕೋಣಾಜೆ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.