ಮಂಗಳೂರು: ಮಹಿಳೆಯರು ಬಟ್ಟೆ ಬದಲಾಯಿಸುವ ರೂಮ್ ನಲ್ಲಿ ರಹಸ್ಯ ಕ್ಯಾಮರಾ

ಮಂಗಳೂರು: ಸುರತ್ಕಲ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯರು ಉಡುಪು ಬದಲಾಯಿಸುವ ಕೊಠಡಿಯಲ್ಲಿ ರಹಸ್ಯ ಕ್ಯಾಮರಾ ಇರಿಸಿ ದೃಶ್ಯಗಳನ್ನು ಸೆರೆ ಹಿಡಿದ ಆರೋಪದಡಿ ನರ್ಸಿಂಗ್‌ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸಿಂಗ್‌ ವಿದ್ಯಾರ್ಥಿ ಪವನ್‌ ಈ ಕೃತ್ಯವೆಸಗಿದ ಆರೋಪಿ. ಮೂಲತಃ ಕಲಬುರಗಿಯವನಾದ ಪವನ್‌ ಬಜಪೆಯಲ್ಲಿ ವಾಸವಿದ್ದ. ಆಸ್ಪತ್ರೆಗೆ ತಪಾಸಣೆಗೆ ಬಂದವರು ಸ್ಕ್ಯಾನಿಂಗ್‌ಗೆ ಒಳಗಾಗುವ ಮುನ್ನ ಬಟ್ಟೆ ಬದಲಾಯಿಸಬೇಕಾಗುತ್ತದೆ. ಪವನ್‌ ಮಹಿಳೆಯರು ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ.

ಸ್ಕ್ಯಾನಿಂಗ್‌ಗೆ ಒಳಗಾಗಲು ಬಂದಿದ್ದ ಯುವತಿಯೊಬ್ಬರು ಉಡುಪು ಬದಲಾಯಿಸುವ ಮೊದಲು ಕೊಠಡಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮೂಲೆಯಲ್ಲಿ ರಹಸ್ಯ ಕ್ಯಾಮರಾ ಇರುವುದು ಪತ್ತೆಯಾಗಿದೆ.

ಕೂಡಲೇ ಅವರು ಈ ವಿಷಯವನ್ನು ವೈದ್ಯರ ಗಮನಕ್ಕೆ ತಂದಿದ್ದು, ತನಿಖೆ ನಡೆಸಿದಾಗ ಪವನ್‌ ಕುಮಾರ್‌ ಕ್ಯಾಮರಾ ಇರಿಸಿರುವುದು ಪತ್ತೆಯಾಗಿದೆ. ಈ ಬಗ್ಗೆ ಸುರತ್ಕಲ್‌ ಠಾಣೆಗೆ ದೂರು ನೀಡಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

You cannot copy content from Baravanige News

Scroll to Top