ಕುತ್ಯಾರು ಡಿ 10: ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕೇಂಜ ಕುತ್ಯಾರಿನಲ್ಲಿ ಇಂದು (ಡಿ. 10) ನೇಮೋತ್ಸವ ನಡೆಯಲಿದೆ. ಇಂದು ಸಂಜೆ 6.30ಯಿಂದ ಶ್ರೀ ಬ್ರಹ್ಮ ಬೈದರ್ಕಳ ಕಾಲಾವಧಿ ಜಾತ್ರೆ, ಮಹಾ ಅನ್ನಸಂತರ್ಪಣೆ, ಸುರಿಯ ಕೊಡುವುದು, ಶ್ರೀ ಬ್ರಹ್ಮ ಬೈದರ್ಕಳ ದರ್ಶನ ನಡೆಯಲಿದೆ.
ನಾಳೆಯೂ ಸೂರ್ಯೋದಯದಿಂದ ಕಾರ್ಯಕ್ರಮ ಆರಂಭವಾಗಲಿದ್ದು ಮೈಂದ ಪೂಜಾರಿ ನೇಮ, ಜೋಗಿ ಪುರುಷ ನೇಮ, ಮಾಯಂದಾಲೆ ನೇಮ, ಶುದ್ಧೀ ಕಲಶ, ಶುದ್ಧದ ಅಗೇಲು ಸೇವೆ, ಶ್ರೀ ಬ್ರಹ್ಮ ಬೈದರ್ಕಳ ದರ್ಶನ ನಡೆಯಲಿದೆ.
ನೇಮೋತ್ಸವದಲ್ಲಿ ಊರ ಪರಪೂರ ಭಕ್ತಾದಿಗಳು ಪಾಲ್ಗೊಳ್ಳಲಿದ್ದು ಅವರಿಗೆ ಅನುಕೂಲವಾಗುವಂತೆ ಬರವಣಿಗೆ ನ್ಯೂಸ್ ವತಿಯಿಂದ ಬೃಹತ್ LED ಪರದೆಯ ವ್ಯವಸ್ಥೆ ಹಾಗೂ ನೇಮೋತ್ಸವದ ಸಂಪೂರ್ಣ ನೇರಪ್ರಸಾರ ಸಂಜೆ 6-00 ರಿಂದ BARAVANIGE NEWS ಯುಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗಲಿದೆ