ದುಬೈಗೆ ತೆರಳಿದ್ದ ಕೇರಳದ ಯುವಕ ನಿದ್ರಾವಸ್ಥೆಯಲ್ಲೇ ಹೃದಯಾಘಾತದಿಂದ ಮೃತ್ಯು!

ದುಬೈ: ದುಬೈನಲ್ಲಿ ಮಲಗಿದ್ದಲ್ಲೇ ಕೇರಳ ನಿವಾಸಿ ಯುವಕ‌ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮಯ್ಯನ್ನೂರು ಅಂಗಡಿ ಮುಕೋಳ ಭಾಗದ ಚೆರಿಯಪರಂಬ ನಿವಾಸಿ ಝಾಕೀರ್(33) ಮೃತ ಯುವಕ. ಝಾಕೀರ್ ದುಬೈಗೆ ತೆರಳಿದ ಮರುದಿ‌ನ ನಿದ್ರಾವಸ್ಥೆಯಲ್ಲೇ ಇಹಲೋಕ ತ್ಯಜಿಸಿದ್ದಾರೆ.ಝಾಕೀರ್ ನಿಧನಕ್ಕೆ ಹೃದಯಾಘಾತ ಕಾರಣ ಎನ್ನುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ನಿದ್ರಾವಸ್ಥೆಯಲ್ಲಿ ಹೃದಯಾಘಾತವಾಗಿರುವುದು ಝಾಕೀರ್ ನಿಧನಕ್ಕೆ ಕಾರಣ ಎಂದು ವೈದ್ಯರು ಹೇಳಿದ್ದಾರೆ.

ಝಾಕೀರ್ ದುಬೈನಲ್ಲಿ ಕೆಲ ವರ್ಷಗಳಿಂದ ಲಿಪ್ಟ್ ಆಫರೇಟರ್ ಆಗಿ ಕೆಲಸ‌ ಮಾಡುತ್ತಿದ್ದರು.ಇನ್ನು ಝಾಕೀರ್ ನಿಧನದ ಬೆನ್ನಲ್ಲೇ ಝಾಕೀರ್ ಕುರಿತ ವಿಡಿಯೋವೊಂದು ನೆಟ್ಟಿನಲ್ಲಿ‌ ಭಾರೀ ವೈರಲ್ ಆಗಿದೆ.ಝಾಕೀರ್ ಕೊನೆಯ ಬಾರಿಗೆ ಊರಿಗೆ ಭೇಟಿ ನೀಡಿದ್ದ ವೇಳೆ ತಾಯಿ ತುತ್ತು‌ ಅನ್ನವನ್ನು ತಿನ್ನಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ. ವರದಿ ಪ್ರಕಾರ ವಿಡಿಯೋವನ್ನು ಝಾಕೀರ್ ಪುತ್ರ ಸೆರೆ ಹಿಡಿದಿದ್ದಾನೆ.‌ ವಿಡಿಯೋ ಝಾಕೀರ್ ದುಬೈಗೆ ಹೊರಡುವ ಮೊದಲ ಕ್ಷಣದ್ದು ಎನ್ನಲಾಗಿದೆ.

You cannot copy content from Baravanige News

Scroll to Top