ಬಂಟಕಲ್ಲು ಡಿ 20: ನಾಗರಿಕ ಸೇವಾ ಸಮಿತಿ ರಿ. ಬಂಟಕಲ್ಲು ಮತ್ತು ಶ್ರೀ ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜು ಬಂಟಕಲ್ಲು ಇದರ NSS ಘಟಕ ದ ಆಶ್ರಯದಲ್ಲಿ ಪೋಲಿಸ್ ಆರಕ್ಷಕರ ಠಾಣೆ ಶಿರ್ವ ಇವರ ಸಹಯೋಗ ದೊಂದಿಗೆ ರಿಕ್ಷಾ ಚಾಲಕ ಮಾಲಕರ ಸಂಘ ಬಂಟಕಲ್ಲು, ಕಾರು ಚಾಲಕರ ಮಾಲಕರ ಸಂಘ ಬಂಟಕಲ್ಲು, ಇವರ ಸಹಕಾರದೊಂದಿಗೆ ಅಪರಾಧ ತಡೆ ಮಾಸಾಚರಣೆ – ರಸ್ತೆ ಸುರಕ್ಷತಾ ಜಾಥಾ; ಜಾಗೃತಿ ಮಾಹಿತಿ ಕಾರ್ಯಕ್ರಮ ವು ಬಂಟಕಲ್ಲು ಶ್ರೀ ಮಧ್ವವಾದಿರಾಜ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು.
ಕಾರ್ಕಳ ವಲಯ ಪೊಲೀಸ್ ಉಪಾಧೀಕ್ಷಕರಾದ ವಿಜಯ ಪ್ರಸಾದ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ರಸ್ತೆ ಸುರಕ್ಷತಾ ನಿಯಮಗಳ ಮಾಹಿತಿ ಕರಪತ್ರವನ್ನು ಮಾಡಿ ಮಕ್ಕಳನ್ನು ಉದ್ದೇಶಿಸಿ ಮಾನಾಡಿದರು. ಅಪರಾಧ ತಡೆ, ರಸ್ತೆ ಸುರಕ್ಷತೆ, ಫೋಕ್ಸೊ ಕಾಯಿದೆ, ಮಾದಕ ವ್ಯಸನ, ಅಮಲು ಪದಾರ್ಥ ಸೇವನೆ ಅತೀಯಾದ ಮೊಬೈಲ್ ಬಳಕೆ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.ವಾಹನ ಚಾಲನೆ ವೇಳೆಯಲ್ಲಿ ಖಡ್ಡಾಯವಾಗಿ ರಸ್ತೆ ಸುರಕ್ಷಾ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು.
ಹಲ್ಮೆಟನ್ನು ತಪ್ಪದೆ ಧರಿಸಿ ನಿಮ್ಮ ಜೀವದ ರಕ್ಷಣೆಯನ್ನು ಮಾಡುವಂತೆ ತಿಳಿಸಿ, ಯಾವುದೇ ಅಪರಾದ ಪ್ರಕರಣಗಳಲ್ಲಿ ಭಾಗಿಯಾಗದೆ ತಮ್ಮ ವಿದ್ಯಾರ್ಥಿ ಜೀವನದ ಉದ್ದೇಶವನ್ನು ಸಾರ್ಥಕಗೊಳಿಸಿ ಎಂದು ಕರೆ ನೀಡಿದರು. ಕಾಲೇಜಿನ ಡೀನ್ ಡಾ ಸುದರ್ಶನ್ ರಾವ್ ಕೆ ರವರು ಸಹೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಪು ವೃತ್ತ ಪೊಲೀಸ್ ವೃತ್ತ ನಿರೀಕ್ಷಕರಾದ ಪೂವಯ್ಯ, ಶಿರ್ವ ಠಾಣಾದಿಕಾರಿ ರಾಘವೇಂದ್ರ , ಎನ್ ಎಸ್ ಎಸ್ ಯೋಜನಾಧಿಕಾರಿ ನಾಗರಾಜ ರಾವ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆ ಆರ್ ಪಾಟ್ಕರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಮಾಹಿತಿ ಕಾರ್ಯಕ್ರಮದ ಬಳಿಕ ಕಾಲೇಜಿನಿಂದ ಬಂಟಕಲ್ಲು ಪೇಟೆಯವರೆಗೆ ರಸ್ತೆ ಸುರಕ್ಷತಾ ಜಾಥ ನಡೆಯಿತು. ಪೊಲೀಸ್ ಉಪಾಧೀಕ್ಷಕ ವಿಜಯ ಪ್ರಸಾದ್ ರವರು ಜಾಥಕ್ಕೆ ಹಸಿರು ನಿಶಾನೆ ತೋರಿದರು. ಜಾಥಧಲ್ಲಿ ಸುಮಾರು ಇನ್ನೂರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಲೇಜಿನ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು, ಉಪನ್ಯಾಸಕ ವೃಂದ, ಶಿರ್ವ ಪೊಲೀಸ್ ಠಾಣಾ ಸಿಬ್ಬಂಧಿವರ್ಗ, ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಕಾರ್ಯದರ್ಶಿ ದಿನೇಶ್ ದೇವಾಡಿಗ, ಕೊಶಾಧಿಕಾರಿ ಜಗದೀಶ್ ಆಚಾರ್ಯ, ಜೊತೆ ಕಾರ್ಯದರ್ಶಿ ರೋಹಿಣಿ, ಕಾರು ಚಾಲಕ ಮಾಲಕರ ಸಂಘದ ಉಮೇಶ್ ರಾವ್, ರಿಕ್ಷಾ ಚಾಲಕ ಮಾಲಕ ಸಂಘದ ಮಂಜುನಾಥ್, ನಿವೃತ್ತ ಸೈನಿಕ ರಾಜೇಂದ್ರ ಪಾಟ್ಕರ್,ವಿರೇಂದ್ರ ಪಾಟ್ಕರ್, ಡೇನಿಸ್ ಡಿ ಸೋಜಾ, ರಾಘವೇಂದ್ರ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ವಿದೀಶ್ ರವರು ಕಾರ್ಯಕ್ರಮ ನಿರೂಪಿಸಿದರು, ಕುಮಾರಿ ಚೈತ್ರ ಧನ್ಯವಾದವಿತ್ತರು.