ಉಡುಪಿ: ಮೆಹಂದಿ ಕಾರ್ಯಕ್ರಮವೊಂದರಲ್ಲಿ ಅವಧಿ ಮೀರಿ ಅತೀ ಕರ್ಕಶವಾದ ಡಿ.ಜೆ ಸೌಂಡ್ ಹಾಕಿದ್ದ ಮನೆಗೆ ಪೊಲೀಸರು ದಾಳಿ ಮಾಡಿದ ಘಟನೆ ಕುಂಜಿಬೆಟ್ಟುವಿನಲ್ಲಿ ನಡೆದಿದೆ.
ಕುಂಜಿಬೆಟ್ಟು ಪರಿಸರದಲ್ಲಿ ಫೆ.26ರಂದು ತಡರಾತ್ರಿ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಕರ್ಕಶವಾದ ಡಿಜೆ ಸೌಂಡ್ ಹಾಕಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ದೂರಿನ ಮೇರೆಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
76 ಬಡಗಬೆಟ್ಟು ಗ್ರಾಮದ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದ ಬಳಿ ಶರತ್ ಎಂಬವರ ಮನೆಯಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅತೀ ಕರ್ಕಶವಾದ ಡಿಜೆ ಸೌಂಡ್ ಹಾಕಿಕೊಂಡು ರಾತ್ರಿ 2 ಗಂಟೆಯವರೆಗೆ ನೃತ್ಯ ಮಾಡುತ್ತಿದ್ದರು.
ಈ ವೇಳೆ ಪೊಲೀಸರು 4 ಸೌಂಡ್ ಬಾಕ್ಸ್, ಡಿಜೆ ಪರಿಕರಗಳು, ಲೈಟಿಂಗ್ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.