ಸರ್ಕಾರಿ ನೌಕರರ ಮುಷ್ಕರ: ಉಡುಪಿಯಲ್ಲಿ ಬೆಂಬಲ; ಶಾಲಾ-ಕಾಲೇಜು, ಆಸ್ಪತ್ರೆ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ಸ್ಥಗಿತ

ಉಡುಪಿ: ರಾಜ್ಯಾದ್ಯಂತ 7 ನೇ ವೇತನ ಆಯೋಗ ಜಾರಿಗೆ
ಆಗ್ರಹಿಸಿ ಸರಕಾರಿ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಉಡುಪಿಯಲ್ಲಿ ಬೆಂಬಲ ವ್ಯಕ್ತವಾಗಿದೆ.

ಉಡುಪಿಯಲ್ಲಿ ಸರಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳು ಸ್ಥಗಿತವಾಗಿದ್ದು, ಸರಕಾರಿ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದರಿಂದ ಹಲವು ಕಾಲೇಜುಗಳಲ್ಲಿ ಇಂದು ನಡೆಯಬೇಕಿದ್ದ ಪದವಿ ಪೂರ್ವ
ಮತ್ತು ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.

ಶಾಲಾ ಕಾಲೇಜುಗಳಿಗೆ ರಜೆ ಬಗ್ಗೆ
ನಿನ್ನೆಯಿಂದಲೇ ಸುದ್ದಿಗಳು ಹರಿದಾಡುತ್ತಿದ್ದಾದರೂ ಕೆಲ ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ಪರೀಕ್ಷೆ ಇದ್ದ ಕಾರಣ ಕಾಲೇಜಿಗೆ ತೆರಳಿ ವಾಪಾಸ್ಸಾಗುತ್ತಿರುವ ದೃಶ್ಯಗಳು ಉಡುಪಿ, ಮಣಿಪಾಲದಲ್ಲಿ ಕಂಡು ಬಂದಿದೆ.

ಸರಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳು ಸ್ಥಿತವಾಗಿರುವುದರಿಂದ ಕಚೇರಿಗಳಲ್ಲಿ ಸಾರ್ವಜನಿಕರ ಓಡಾಟ ಇಲ್ಲದೆ ಬಿಕೋ ಎನಿಸುತ್ತಿತ್ತು. ಅಲ್ಲದೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರುಗಳೂ ಸರಕಾರಿ ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ತುರ್ತು ಸೇವೆ ಹೊರತು ಪಡಿಸಿ ಇತರ
ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಇದರಿಂದಾಗಿ ಇಂದು ಸರಕಾರಿ ಆಸ್ಪತ್ರೆಗೆ ತೆರಳುವ ರೋಗಿಗಳು
ಪರದಾಡುವಂತಾಗಿದೆ..

Scroll to Top