ನವದೆಹಲಿ: ಕೋವಿಡ್ -19 ಸೋಂಕಿನ ಲಸಿಕೆ ನಂತರ ಹೃದಯಾಘಾತ, ಸಕ್ಕರೆ ಕಾಯಿಲೆ ಅಪಾಯವು ಶೇಕಡಾ ನಾಲ್ಕರಿಂದ ಐದರಷ್ಟು ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಾಜಿ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
ಕೋವಿಡ್ -19 ಸೋಂಕು ನಂತರ ಹೃದಯಾಘಾತಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗಿದೆ. ಕರೊನಾ ಮಾನವನ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬಿರಿದೆ. ಹೀಗಾಗಿ ಹೃದಯಾಘಾತ, ಮಧುಮೇಹ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಾಗಿ ಸಂಭವಿಸುತ್ತಿವೆ. ಕೋವಿಡ್ -19ಗೆ ಕಾರಣವಾಗುವ ಜೀವಿಯಾದ SARS- CoV-2, ಕೋವಿಡ್ -19 ವ್ಯಾಕ್ಸಿನೇಷನ್‌ನಿಂದ ರೋಗನಿರೋಧಕ ಶಕ್ತಿಯನ್ನು ಮೀರಿಸುವ ರೀತಿಯಲ್ಲಿ ರೂಪಾಂತರಗೊಳ್ಳುತ್ತದೆ. ಹೀಗಾಗಿ ಸಣ್ಣ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
ನವದೆಹಲಿಯ ನ್ಯಾಷನಲ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನ ಸಂದರ್ಶಕ ಸಲಹೆಗಾರ ಡಾ ಬಿಕ್ರಮ್ ಕೇಶರಿ ಮೊಹಾಂತಿ ಮಾತನಾಡಿ, ಕರೊನಾದಿಂದ ಶ್ವಾಸಕೋಶ ಮತ್ತು ಹೃದಯದ ಮೇಲೆ ಪರಿಣಾಮ ಉಂಟಾಗುತ್ತದೆ. ದೇಹದೊಳಗಿನ ಒತ್ತಡದಿಂದ ಕಿಣ್ವಗಳ ಬಿಡುಗಡೆಯಾಗಿ ಹೃದಯ ಸ್ನಾಯುವಿನ ಕಾಯಿಲೆ ಊಂಟಾಗುತ್ತಿದೆ ಎಂದು ಹೇಳಿದ್ದಾರೆ.
COVID-19 ಲಸಿಕೆ ಮತ್ತು ಹೃದಯಾಘಾತಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ. ಆದರೆ ಕೋವಿಡ್-19 ವ್ಯಾಕ್ಸಿನೇಷನ್ ನಂತರ, ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಮೇಲೆ ತೀವ್ರ ಪರಿಣಾಮ ಬಿರುತ್ತದೆ. ಹೀಗಾಗಿ ಹೃದಯಾಘಾತ ಹೆಚ್ಚಾಗುತ್ತಿದೆ ಎಂದಿದ್ದಾರೆ.