ನವದೆಹಲಿ: ಮಾರ್ಚ್ 4ರಿಂದ ಆರಂಭವಾಗಲಿರುವ ಮಹಿಳಾ ಪ್ರೀಮಿಯರ್ ಲೀಗ್ ವೀಕ್ಷಣೆಗೆ ಮಹಿಳೆಯರಿಗೆ ಉಚಿತ ಪ್ರವೇಶ ನೀಡುವುದಾಗಿ ಬಿಸಿಸಿಐ ಪ್ರಕಟಿಸಿದೆ.
ಪುರುಷರು ಮಹಿಳಾ ಐಪಿಎಲ್ ವೀಕ್ಷಿಸಬೇಕಾದರೆ ಸ್ವಲ್ಪ ದರ ತೆರಬೇಕಾಗುತ್ತದೆ.
ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಗಳ ಸರಣಿ ವೀಕ್ಷಣೆಗೆ ಮಹಿಳೆಯರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಅದೇ ಪ್ರಯೋಗವನ್ನು ಮಹಿಳಾ ಐಪಿಎಲ್‌ನಲ್ಲಿಯೂ ಬಿಸಿಸಿಐ ಮಾಡಿದೆ. ಮಾರ್ಚ್ 4ರಿಂದ ಆರಂಭವಾಗುವ ಮಹಿಳಾ ಐಪಿಎಲ್‌ಗೆ ಮಹಿಳೆಯರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಪುರುಷರಿಗೆ 100 ರೂ. ಟಿಕೆಟ್ ದರ ವಿಧಿಸಲಾಗುತ್ತದೆ. ಬುಕ್ ಮೈ ಶೋ ಅಥವಾ ಪೇಟಿಎಂ ಇನ್‌ಸೈಡರ್ ಮೂಲಕ ಟಿಕೆಟ್ ಬುಕ್ ಮಾಡಲು ಅವಕಾಶವಿದೆ. ಇದರಲ್ಲಿ ಮಹಿಳೆಯರು ಉಚಿತ ನೋಂದಾವಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.
ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ. ವೀಕ್ಷಕರನ್ನು ಹೆಚ್ಚಿಸುವ ಸಲುವಾಗಿ ಬಿಸಿಸಿಐ ಮಹಿಳೆಯರಿಗೆ ಉಚಿತ ಪ್ರವೇಶ ನೀಡುತ್ತಿದೆ. ಮುಂಬೈನ ಬ್ರೆಬನ್ ಸ್ಟೇಡಿಯಂ, ವಾಂಖೆಡೆ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮಹಿಳಾ ಐಪಿಎಲ್‌ನ ಎಲ್ಲಾ ಪಂದ್ಯಗಳು ನಡೆಯಲಿವೆ.