ಹಿಂದಿನ ಕಾಲದಲ್ಲಿ ಸತ್ಯಾ ಸತ್ಯತೆಯ ಶೋಧನೆಗಾಗಿ ಅಗ್ನಿ ಪರೀಕ್ಷೆ ನಡೆಸಲಾಗುತ್ತಿತ್ತು. ಮಾತ್ರವಲ್ಲದೆ ಚಿತೆಗೆ ಹಾರುವ ಸನ್ನಿವೇಶವು ಎದುರಾಗುತ್ತಿತ್ತು. ಆದರೆ ಮಾಡರ್ನ್ ಯುಗದಲ್ಲಿ ತಪ್ಪು ಮಾಡಿದರೆ ಪೊಲೀಸ್ ಠಾಣೆ ಇದೆ, ಕೋರ್ಟ್ ಇದೆ. ಎಂತವನೇ ಆದರು ಶಿಕ್ಷೆ ಆಗೇ ಆಗುತ್ತದೆ. ಆದರೆ ತೆಲಂಗಾಣದಲ್ಲಿ ಮಾತ್ರ ತಪ್ಪು ಮಾಡಿದ್ದಾನೋ ಇಲ್ಲವೋ ಎಂದು ಪರಿಶೀಲಿಸಲು ವ್ಯಕ್ತಿಯೊಬ್ಬನಿಗೆ ಅಗ್ನಿ ಪರೀಕ್ಷೆ ನಡೆಸಲಾಗಿದೆ. ಅನೈತಿಕ ಸಂಬಂಧ ವಿಚಾರವಾಗಿ ವ್ಯಕ್ತಿ ಅಗ್ನಿ ಪರೀಕ್ಷೆ ಎದುರಿಸಿದ್ದಾನೆ. ಈ ದೃಶ್ಯ ಇದೀಗ ಭಾರೀ ವೈರಲ್ ಆಗಿದೆ.
ಅಂದಹಾಗೆಯೇ ತೆಲಂಗಾಣದ ಮುಲುಗು ಮಂಡಲದ ಬಂಜಾರಪಲ್ಲಿ ಎಂಬ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಗಂಗಾಧರ್ ಎಂಬಾತ ಅನೈತಿಕ ಸಂಬಂಧ ವಿಚಾರವಾಗಿ ಕೆಂಡದಲ್ಲಿದ್ದ ಕಬ್ಬಿಣದ ಸಲಾಕೆಯನ್ನು ತೆಗೆದಿದ್ದಾನೆ. ತಾನು ಸತ್ಯವಾನ್ ಸಾವಿತ್ರಪ್ಪ ಎಂದು ಪ್ರತಿಪಾದಿಸಲು ಮತ್ತು ಏಕಪತ್ನಿ ವೃತಸ್ಥ ಎಂದು ಸಾಬೀತು ಪಡಿಸಲು ಬರೋಬ್ಬರಿ 11 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಗಂಗಾಧರ್ ಎದುರಿಸಿದ ಅಗ್ನಿ ಪರೀಕ್ಷೆಯ ದೃಶ್ಯ ಇಲ್ಲಿದೆ ನೋಡಿ.
ಇಂದೆಥಾ ಅಗ್ನಿ ಪರೀಕ್ಷೆ?
ವ್ಯಕ್ತಿಯೋರ್ವ ತನ್ನ ಹೆಂಡತಿ ಜೊತೆಗೆ ಗಂಗಾಧರ್ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿದ್ದಾನೆ. ಇದೇ ವಿಚಾರಕ್ಕೆ ಆರೋಪಿಸಿದ ವ್ಯಕ್ತಿ ಮತ್ತು ಆತನ ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಮಾತ್ರವಲ್ಲದೆ ವ್ಯಕ್ತಿ ಇದೇ ವಿಚಾರವಾಗಿ ಜಾತಿಯ ಹಿರಿಯರಿಗೆ ದೂರು ನೀಡಿದ್ದು, ತನಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಕೂಡ ಮಾಡಿದ್ದನು. ಬಳಿಕ ಗಂಗಾಧರ್ ಕರೆಸಿ ಹಿರಿಯರು ಆತನಿಗೆ ಅಗ್ನಿ ಪರೀಕ್ಷೆ ಮಾಡಿದ್ದಾರೆ.
ಹಿರಿಯರನ್ನು ಭೇಟಿ ಮಾಡಿದ್ದ ಗಂಗಾಧರ್ ತಾನು ಯಾವುದೇ ಅನೈತಿಕ ಸಂಬಂಧ ಹೊಂದಿಲ್ಲ ಎಂದು ಹೇಳಿಕೊಂಡಿದ್ದಾನೆ. ಬಳಿಕ ತನ್ನ ಪ್ರಾವಿತ್ಯತೆಯನ್ನು ಸಾಬೀತು ಪಡಿಸಲು ಅಗ್ನಿಯಲ್ಲಿದ್ದ ಕಬ್ಬಿಣದ ಸಲಾಕೆಯನ್ನು ತೆಗೆದು ತಾನು ತಪ್ಪಿತಸ್ಥ ಅಲ್ಲ ಎಂದು ಸಾಬೀತು ಪಡಿಸಿದ್ದಾನೆ.
ಫೆಬ್ರವರಿ 25 ರಂದು ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಲದಲ್ಲಿ ವೈರಲ್ ಆಗಿದೆ. ಅನೇಕರು ಈ ವಿಡಿಯೋ ನೋಡಿ ಮಾಡರ್ನ್ ರಾಮಾಯಣ ಎಂದು ಹೇಳುತ್ತಿದ್ದಾರೆ.