ಜ್ಯುವೆಲ್ಲರಿಗೆ ನುಗ್ಗಿ ಸಿಬ್ಬಂದಿಯ ಹತ್ಯೆ ಪ್ರಕರಣ; ಕಾಸರಗೋಡಿನಲ್ಲಿ ಆರೋಪಿಯ ಬಂಧನ..!

ಮಂಗಳೂರು: ಹಂಪನ ಕಟ್ಟೆ ಜುವಲ್ಲರಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೋಜಿಕ್ಕೋಡ್ ಕೊಯಿಲಾಂಡಿಯ ಶಿಫಾಝ್ (33) ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಕಾಸರಗೋಡಿನಲ್ಲಿ ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಗರದ ಮಲ್ಲಿಕಾರ್ಜುನ ದೇವಸ್ಥಾನ ಪರಿಸರದಿಂದ ಕಾಸರಗೋಡು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹಂಪನಕಟ್ಟೆ ಮಿಲಾಗ್ರಿಸ್ ಸಮೀಪ ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸದ ಸಿಬಂದಿಯನ್ನು ಚೂರಿ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಫೆ. 3ರ ಶುಕ್ರವಾರ ನಡೆದಿತ್ತು.

ಅತ್ತಾವರ ನಿವಾಸಿ ರಾಘವ(50) ಹತ್ಯೆಗೀಡಾಗಿದ್ದರು. ಜ್ಯುವೆಲ್ಲರಿಯಿಂದ ಓರ್ವ ಮುಸುಕುಧಾರಿ ಹೊರಗೆ ಬರುವ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿತ್ತು.

ಇನ್ನು ಅಂಗಡಿಯಲ್ಲಿ ಒಬ್ಬರೇ ಇದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ದರೋಡೆಯೆ ಅಥವಾ ಬೇರೆ ಕಾರಣವೇ ತಿಳಿದು ಬಂದಿಲ್ಲ.‌ ಅಂಗಡಿ ಮಾಲಕರು ಊಟ ಮಾಡಿ ಬಂದಾಗ ಘಟನೆ ಗಮನಕ್ಕೆ ಬಂದಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

You cannot copy content from Baravanige News

Scroll to Top