‘ನಿನಗಾಗಿ ಕಾಯುತ್ತಿದ್ದೇವೆ.’.; ಮೆಸ್ಸಿ ಸೂಪರ್ ಮಾರ್ಕೆಟ್ ಗೆ ದಾಳಿ ನಡೆಸಿದ ಬಂದೂಕುಧಾರಿಗಳು..!!

ವಿಶ್ವಕಪ್ ಫುಟ್ಬಾಲ್ ವಿಜೇತ ನಾಯಕ, ದಿಗ್ಗಜ ಲಿಯೋನಲ್ ಮೆಸ್ಸಿ ಅವರ ಕುಟುಂಬದ ಸೂಪರ್ ಮಾರ್ಕೆಟ್ ಗೆ ಬಂದೂಕುಧಾರಿಗಳಿಬ್ಬರು ದಾಳಿ ಮಾಡಿದ್ದು, ಮೆಸ್ಸಿಗೂ ಬೆದರಿಕೆ ನೀಡಿದ್ದಾರೆ.

“ಮೆಸ್ಸಿ, ನಾವು ನಿನಗಾಗಿ ಕಾಯುತ್ತಿದ್ದೇವೆ. ಜಾವ್ಕಿನ್ ಒಬ್ಬ ನಾರ್ಕೋ, ಅವನು ನಿನ್ನನ್ನು ನೋಡಿಕೊಳ್ಳುವುದಿಲ್ಲ” ಎಂದು ಗುರುವಾರ ಮುಂಜಾನೆ ಸೂಪರ್ ಮಾರ್ಕೆಟ್ ಮುಂಭಾಗಕ್ಕೆ 14 ಗುಂಡುಗಳನ್ನು ಹೊಡೆದ ವ್ಯಕ್ತಿಗಳು ನೆಲದ ಮೇಲೆ ಕೈಬರಹದ ಸಂದೇಶವನ್ನು ಇಟ್ಟು ಹೋಗಿದ್ದಾರೆ.

ಪಾಬ್ಲೊ ಜಾವ್ಕಿನ್ ಅವರು ಮೆಸ್ಸಿಯ ತವರು ರೊಸಾರಿಯೊದ ಮೇಯರ್ ಆಗಿದ್ದಾರೆ. ಅಲ್ಲಿ ಮೆಸ್ಸಿ ಕುಟುಂಬದ ಸೂಪರ್ ಮಾರ್ಕೆಟ್ ಇದೆ. ಇದು ಬ್ಯೂನಸ್ ಐರಿಸ್‌ ನಿಂದ ವಾಯುವ್ಯಕ್ಕೆ 320 ಕಿಲೋಮೀಟರ್ ದೂರದಲ್ಲಿದೆ.

ಇಬ್ಬರು ವ್ಯಕ್ತಿಗಳು 3 ಗಂಟೆಯ ಸಮಯಕ್ಕೆ ಮೋಟಾರ್ ಬೈಕ್‌ ನಲ್ಲಿ ಬಂದಿರುವುದನ್ನು ಪ್ರತ್ಯಕ್ಷದರ್ಶಿಗಳು ದೃಢಪಡಿಸಿದರು. ಅವರಲ್ಲಿ ಒಬ್ಬರು ಇಳಿದು ಗುಂಡು ಹಾರಿಸಿದ ಎಂದಿದ್ದಾರೆ.

You cannot copy content from Baravanige News

Scroll to Top