ಚರಂಡಿಗೆ ಬಿದ್ದ ಮಿನಿ ಬಸ್ : ಮಗುವಿಗೆ ಗಾಯ

ಹೆಬ್ರಿ : ಆಗುಂಬೆ ಘಾಟಿಯ ಒಂದನೇ ತಿರುವಿನಲ್ಲಿ ಮಿನಿ ಬಸ್ ಚರಂಡಿಗೆ ಪಲ್ಟಿಯಾದ ಪರಿಣಾಮ 7 ತಿಂಗಳ ಮಗುವೊಂದು ಗಾಯಗೊಂಡ ಘಟನೆ ಸಂಭವಿಸಿದೆ.

ಚಾಲಕ ಗ್ರೆಗೊರಿ ಪಿಂಟೊ ಅವರು ಮಿನಿ ಬಸಸ್ಸನ್ನು ಅತಿವೇಗವಾಗಿ ಚಲಾಯಿಸಿದ್ದು, ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಮಾವಿಜಕಟ್ಟೆ, ಕುಕ್ಕುಂಜೆಯ ನಿವಾಸಿ ಅಬ್ದುಲ್ ಅಜೀಜ್ ಎಂಬವರು ಕುಟುಂಬವರೊಂದಿಗೆ ಕಾರ್ಯಕ್ರಮ ಮುಗಿಸಿ ಮಿನಿ ಬಸ್‌ನಲ್ಲಿ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಮಿನಿಬಸ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬದಿಯ ಕಚ್ಚಾರಸ್ತೆ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದಿದೆ. 7 ತಿಂಗಳ ಮಗು ಅಲಿಮಾ ಸುಲ್ತಾನ ತಲೆಗೆ ತೀವ್ರ ಸ್ವರೂಪದ ಗಾಯವಾಗಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top