ಕಾಂಗ್ರೆಸ್‌ನಲ್ಲಿ 50 ಟಿಕೆಟ್ ಹೊಸಬರಿಗೆ ಫಿಕ್ಸ್..!!? ಎಐಸಿಸಿಯಿಂದ ಕೆಪಿಸಿಸಿಗೆ ಸಂದೇಶ..!!

ಬೆಂಗಳೂರು: ಟಿಕೆಟ್ ಹಂಚಿಕೆ ಸಿದ್ಧತೆ ಬೆನ್ನಲ್ಲೇ ಎಐಸಿಸಿಯಿಂದ ಕೆಪಿಸಿಸಿಗೆ ಹೊಸ ಸಂದೇಶ ರವಾನೆಯಾಗಿದೆ ಎಂದು ವರದಿಯಾಗಿದೆ.

ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಹೊಸಬರಿಗೆ ಮಣೆ ಹಾಕಲು ಕಾಂಗ್ರೆಸ್ ಹೈ ಕಮಾಂಡ್ ಮಂದಾಗಿದೆ ಎನ್ನಲಾಗಿದೆ.

ಕಾಂಗ್ರೆಸ್ ಹಿಂದೆಂದಿಗಿಂತ ದೊಡ್ಡ ಪ್ರಮಾಣದಲ್ಲಿ ಈ ಬಾರಿ ಹೊಸಬರಿಗೆ ಮಣೆ ಹಾಕಲು ತೀರ್ಮಾನಿಸಿದೆ. 224 ಕ್ಷೇತ್ರಗಳಲ್ಲಿ ಕನಿಷ್ಠ 50 ಹೊಸಬರಿಗೆ ಮಣೆ ಹಾಕಲೇಬೇಕು. 50 ಕ್ಷೇತ್ರದಲ್ಲಿ ಮಹಿಳೆಯರು, ಯುವಕರು ಒಳಗೊಂಡಂತೆ ಹೊಸ ಮುಖಕ್ಕೆ ಮಣೆ ಹಾಕಿ ಎಂದು ಎಐಸಿಸಿಯಿಂದ ಕೆಪಿಸಿಸಿಗೆ ಖಡಕ್ ಸಂದೇಶ ಬಂದಿದೆ ಎಂದು ವರದಿಯಾಗಿದೆ.

50 ಹೊಸ ಮುಖ ಸ್ಪರ್ಧೆ ಮಾಡಬಹುದಾದ ಕ್ಷೇತ್ರಗಳ ಪಟ್ಟಿಯನ್ನೂ ನೀಡಲು ಸೂಚನೆ ನೀಡಲಾಗಿದೆ. ಈ ಮೂಲಕ ಕಾಂಗ್ರೆಸ್‌ನಲ್ಲಿ 224 ಕ್ಷೇತ್ರಗಳ ಪೈಕಿ 50 ಕ್ಷೇತ್ರದಲ್ಲಿ ಹೊಸಬರಿಗೆ ಅವಕಾಶ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

You cannot copy content from Baravanige News

Scroll to Top