ಮೇಕಪ್ ಅವಾಂತರ : ಯುವತಿಯ ಮದುವೆಯೇ ರದ್ದು…!!

ಹಾಸನ: ಮದುವೆಗಾಗಿ ಅತಿಯಾದ ಮೇಕಪ್ ಮಾಡಿಸಲು ಹೋಗಿ ಯುವತಿಯೊಬ್ಬಳ ಮದುವೆ ರದ್ದಾದ ಘಟನೆ ಅರಸೀಕೆರೆಯಲ್ಲಿ ನಡೆದಿದೆ.

ಅರಸಿಕರೆಯ ಮದುಮಗಳು ನಗರದ ಅದೊಂದು ಬ್ಯೂಟಿ ಪಾರ್ಲರ್ ಗೆ ಹೋಗಿ ಮದುವೆ ದಿನದ ಮೇಕಪ್ ಗೆ ಆರ್ಡರ್ ಮಾಡಿ, 10 ದಿನದ ಮೊದಲೇ ಮುಖದ ಕಾಂತಿ ಹೆಚ್ಚಿಸಿಕೊಳ್ಳೋಕೆ ಫೇಷಿಯಲ್ ಮಾಡಿಸಿಕೊಂಡಿದ್ದರು.

ಆದರೆ ಅದೇ ಫೇಷಿಯಲ್ ಮದುಮಗಳ ಮುಖವನ್ನೇ ವಿಕಾರ ಮಾಡಿದೆ. ಫೇಷಿಯಲ್ ಮಾಡಿದ ಬಳಿಕ ಇಡೀ ಮುಖ ಕಪ್ಪಾಗಿ ಸುಟ್ಟಂತೆ ಆಗಿದ್ದು ಮದುಮಗಳು ಹಾಗೂ ಇಡೀ ಕುಟುಂಬ ಆತಂಕಗೊಂಡಿದೆ. ಕೂಡಲೆ ಅರಸೀಕೆರೆಯ ಶಿವಕುಮಾರ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಮದುಮಗಳ ಮುಖ ಸಂಪೂರ್ಣ ವಿರೂಪಗೊಂಡಿದ್ದರಿಂದ ನಿಶ್ಚಯವಾಗಿದ್ದ ಮದುವೆ ದಿನಾಂಕವನ್ನು ರದ್ದುಮಾಡಿ ಮದುವೆಯನ್ನ ಮುಂದೂಡಲಾಗಿದೆ.

ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬ್ಯೂಟಿಷಿಯನ್ ಹಾಗೂ ಮದುಮಗಳ ಕಡೆಯವರ ರಾಜಿ ಸಂದಾನದಿಂದ ಪ್ರಕರಣ ಇತ್ಯರ್ಥವಾಗಿದೆಯಾದರೂ ನಡೆದಿರೋ ಘಟನೆಯ ಫೋಟೋಗಳು, ಎಲ್ಲೆಡೆ ವೈರಲ್ ಆಗುತ್ತಿದೆ.

ಮದುವೆ ದಿನ ತಾನು ಅಂದವಾಗಿ ಕಾಣಬೇಕು ಅಂತಾ ಮಾಡಿಸಿಕೊಂಡ ಮೇಕಪ್ ಆಕೆಯ ಬಾಳಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಆಗಿರೋ ಯಡವಟ್ಟು ಅರಿತ, ಸ್ವಂತ ಸಂಬಂಧಿಕರೇ ಆದ ವರನ ಕಡೆಯವರು ಮದುವೆ ದಿನಾಂಕ ಮುಂದೂಡಿ ಮದುವೆ ಮಾಡಿಕೊಳ್ಳಲು ಒಪ್ಪಿದ್ದು ಪ್ರಕರಣ ಸುಖಾಂತ್ಯವಾದಂತಾಗಿದೆ.

You cannot copy content from Baravanige News

Scroll to Top