ಪಡುಬಿದ್ರೆ: ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ಜೀವ ಬೆದರಿಕೆ : ದೂರು ದಾಖಲು

ಪಡುಬಿದ್ರಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಗೋವಿಂದ ರಾಜ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರು ಮಾ.2 ರಂದು ಕಾಪುವಿನ ನಂದಿಕೂರು ಗ್ರಾಮದ ಕೈಗಾರಿಕಾ ಪ್ರದೇಶದ ಶ್ರೀ ಚಕ್ರ ಇಂಡಸ್ಟ್ರಿ ಬಳಿ ಗಾರೆ ಕೆಲಸ ಮಾಡುತ್ತಿರುವಾಗ ಐವಾನ್ ಡಿಸೋಜ ರವರು ಪೋನ್ ಮಾಡಿ ಗ್ಯಾರೇಜಿಗೆ ಬರಲು ತಿಳಿಸಿದ್ದರು. ಅದರಂತೆ ಮಧ್ಯಾಹ್ನದ ವೇಳೆ ಕೈಗಾರಿಕಾ ಪ್ರದೇಶದಿಂದ ಹೋಗುತ್ತಿರುವಾಗ ನಿಟ್ಟೆಯ ಫಾರೂಕ್ ಹಾಗೂ ಆತನ ರೈಟರ್ ಅಲ್ಲಿಗೆ ಬಂದು ಇವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನೆಲಕ್ಕೆ ದೂಡಿ ಬೀಳಿಸಿ, ತುಳಿದು, ಕಲ್ಲಿನಲ್ಲಿ ಹೊಡೆದು ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಚೂರಿಯನ್ನು ತೋರಿಸಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಹಲ್ಲೆಯಿಂದ ಕೈಗೆ ತರಚಿದ ಗಾಯವಾಗಿದ್ದು, ಈ ಬಗ್ಗೆ ಕಾರ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿದೆ ನೀಡಿದ ದೂರಿನಂತೆ ಪಡುಬಿದ್ರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top