ಬಂಟಕಲ್ಲು ಪ್ರಾಧ್ಯಾಪಕಿ ರವಿಪ್ರಭಾ ಕೆ ರವರಿಗೆ ಪಿ.ಎಚ್.ಡಿ ಪದವಿ

ಬಂಟಕಲ್ಲು: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕಿಯಾದ ರವಿಪ್ರಭಾ ಕೆ ರವರು ಎನ್.ಎಮ್.ಎ.ಎಮ್ ತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆ ಇಲ್ಲಿಯ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ರಮೇಶ್ ಭಟ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಸ್ಟಡೀಸ್ ಆಫ್ ಕೊರೊಶನ್ ಇನ್ಹಿಬಿಶನ್ ಆಫ್ ಅಲ್ಯುಮಿನಿಯಂ ಬೈ ಯುಸಿಂಗ್‌ ಸಿಂಪಲ್ ಆ್ಯಂಡ್ ಫ್ಯೂಸ್ಡ್ ಹೀಟಿರೋಸೈಕ್ಲಿಕ್ ಕಾಂಪೌಂಡ್ಸ್ ಇನ್ ಅಸಿಡಿಕ್ ಮಿಡಿಯಮ್ ಎಂಬ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಪ್ರಾಧ್ಯಾಪಕಿಯ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ..

You cannot copy content from Baravanige News

Scroll to Top