ಶಿರ್ವ ಅಕ್ರಮ ಕಟ್ಟಡ ತೆರವು ವಿಚಾರ: ಸೊರಕೆಯ ವಿರುದ್ದ ವ್ಯಂಗ್ಯವಾಗಿ ಟ್ವೀಟ್ ಮಾಡಿದ ಕಾಪು ಶಾಸಕ ಲಾಲಾಜಿ

ಕಾಪು: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕಂದಾಯ ಇಲಾಖೆಗೆ ಸೇರಿದ ಭೂಮಿ ಒತ್ತುವರಿ ಮಾಡುವ ಸಲುವಾಗಿ ಬಡ ದಲಿತ ಮಹಿಳೆಯ ಮನೆಯನ್ನು ಧ್ವಂಸ ಮಾಡಿರುವ ವಿರುದ್ಧ ಕಾಂಗ್ರೇಸ್ ಇಂದು ಶಿರ್ವ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಯಿತು, ಈ ಸಂಧರ್ಭದಲ್ಲಿ ತಲ್ಲಾಟ ನೂಕಾಟದಿಂದ ವಿನಯ್ ಕುಮಾರ್ ಸೊರಕೆಯವ ಬಟ್ಟೆ ಹರಿದಿದ್ದನ್ನು ಕಾಪುವಿನ ಶಾಸಕ ಲಾಲಾಜಿ ಮೆಂಡನ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಟ್ವೀಟ್ನಲ್ಲಿ ”ತನ್ನ ಪಕ್ಷದ ಆಡಳಿತವಿರುವ ಗ್ರಾಮ ಪಂಚಾಯತ್ ಕ್ರಮದ ವಿರುದ್ಧ ಪ್ರತಿಭಟನೆಗೆ ಕೂತ ಮಾಜಿ ಸಚಿವ ಹಳೆ ಅಂಗಿ ಹಾಕಿ ತನ್ನವರಿಂದಲೇ ಹರಿಸಿಕೊಂಡು ಪೌರುಷ ತೋರಿಸಿದ ವಿನಯ ಕುಮಾರ್ ಸೊರಕೆ” ಎಂದು ಬರೆದುಕೊಂಡಿದ್ದಾರೆ.

You cannot copy content from Baravanige News

Scroll to Top